ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಪಾಣಿ ಪೀಠಸಹಿತ ಬೆಳ್ಳಿಕವಚ ಸಮರ್ಪಣೆ

ಚಂಡಿಕಾಯಾಗ, ರುದ್ರಯಾಗ, ರಂಗಪೂಜೆ

ಮರೋಡಿ: ಇಲ್ಲಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಚಂಡಿಕಾಯಾಗ,ರುದ್ರಯಾಗ, ರಂಗಪೂಜೆ ಮತ್ತು ಪಾಣಿ ಪೀಠಸಹಿತ ಬೆಳ್ಳಿಕವಚ ಸಮರ್ಪಣೆ ಸಮಾರಂಭವು ಎ.25 ರಂದು ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಪ್ರಸಾದ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಸುವರ್ಣ, ಕಾರ್ಯದರ್ಶಿ  ಜಯಂತ್  ಕೋಟ್ಯಾನ್ , ಆಡಳಿತ ಮಂಡಳಿ ಸರ್ವಸದಸ್ಯರು, ಮರೋಡಿ, ಸಾವ್ಯ, ಕುತ್ಲೂರು ಹಾಗೂ ಕೊಕ್ರಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು. ಬೆಂಗಳೂರಿನ ಉದ್ಯಮಿ ಶ್ರೀಮತಿ ಗೀತಾ ಮತ್ತು ಸುರೇಶ್ ಹೆಗ್ಡೆ ದಂಪತಿ ಸುಮಾರು ೬ ಕೆ.ಜಿ ತೂಕದ ಪಾಣಿ ಪೀಠಸಹಿತ ಬೆಳ್ಳಿಕವಚವನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.