ನಾಪತ್ತೆಯಾಗಿದ್ದ ಹಳ್ಳಿಂಗೇರಿ ರಮೇಶ್ ಗೌಡರ ಮೃತದೇಹ ಉಪ್ಪಿನಂಗಡಿಯಲ್ಲಿ ಪತ್ತೆ

ರಮೇಶ ಗೌಡ

ಕೊಕ್ಕಡ: ಇಲ್ಲಿನ ಹಳ್ಳಿಂಗೇರಿ ನಿವಾಸಿ, ಕೆಲ ದಿನಗಳ ಹಿಂದೆ ತಾಯಿ ಮನೆಯಿಂದ ನಾಪತ್ತೆಯಾಗಿದ್ದ ದಿ| ಕಾಂತಪ್ಪ ಗೌಡರ ಪುತ್ರ ರಮೇಶ ಗೌಡ(44ವ.) ಅವರ ಮೃತದೇಹ ಬಹುತೇಕ ಕೊಳೆತ ಸ್ಥಿತಿಯಲ್ಲಿ ಎ. 23 ರಂದು ಉಪ್ಪಿನಂಗಡಿ ಹೊಳೆಯ ಬದಿ ಪೊದೆಗಳ ಮಧ್ಯೆ ಪತ್ತೆಯಾಗಿದೆ.

ಶವ ನೇರವಾಗಿ ಗುರುತುಪತ್ತೆ ಹಚ್ಚಲಾರದ ಸ್ಥಿತಿಯಲ್ಲಿದ್ದುದನ್ನು ಪೊಲೀಸರು ನಾಗರಿಕರ ಸಹಕಾರದೊಂದಿಗೆ ಪರಿಶೀಲನೆ ನಡೆಸಿದ್ದು, ಈ ವೇಳೆ ಅವರ ಬಳಿ ಇದ್ದ ಮಾಹಿತಿ ಪತ್ರವೊಂದರಲ್ಲಿ ರಮೇಶ ಹಳ್ಳಿಂಗೇರಿ ಎಂದು ಹೆಸರು ಇದ್ದುದರಿಂದ ವಿಳಾಸ ಪತ್ತೆಗೆ ಶ್ರಮಿಸಿದಾಗ ಅದು ಹಳ್ಳಿಂಗೇರಿಯಿಂದ ನಾಪತ್ತೆಯಾಗಿರುವ ಇದೇ ರಮೇಶ್ ಅವರ ಮೃತದೇಹವೆಂದು ದೃಢಪಟ್ಟಿದೆ.

ಅವರ ಕುಟುಂಬವರ್ಗದವರು ಮೃತದೇಹವನ್ನು ವೀಕ್ಷಿಸಿದ್ದು, ವಸ್ತ್ರದ ಆಧಾರದಲ್ಲಿ ದೃಢಪಡಿಸಿದ್ದಾರೆ. ರಮೇಶ್ ಅವರು ನಾಪತ್ತೆಯಾಗಿರುವ ವಿಳಾಸ ಧರ್ಮಸ್ಥಳ ಠಾಣಾ ವ್ಯಾಪ್ತಿಗೊಳಪಟ್ಟಿದ್ದು ಇಲ್ಲಿ ಯಾವುದೇ ನಾಪತ್ತೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ ದೊರೆತ ಮಾಹಿತಿ ಪ್ರಕಾರ ರಮೇಶ ಅವರು ತೀವ್ರ ಕುಡಿತದ ಚಟ ಅಂಟಿಸಿಕೊಂಡವರಾಗಿದ್ದು ಆಗಾಗ ಮನೆ ಬಿಟ್ಟು ಹೋಗುವ ಹವ್ಯಾಸ ಹೊಂದಿದ್ದರು. ಹೀಗೆ ಹೋದವರು ಕೆಲದಿನಗಳ ಬಳಿಕ ಮತ್ತೆ ಮನೆ ಸೇರುತ್ತಿದ್ದರು. ಆದರೆ ಈ ಬಾರಿ ಅವರು ಕಡಬ ಠಾಣಾ ವ್ಯಾಪ್ತಿಯ ಪತ್ನಿ ಮನೆಯಿಂದ ನಾಪತ್ತೆಯಾಗಿರುವುದಾಗಿ ಹೇಳಲಾಗಿದ್ದು, ಪತ್ನಿ ಕಡೆಯವರು ಕಡಬ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರಾದರೂ ಪ್ರಕರಣ ದಾಖಲಾಗಿಲ್ಲ ಎಂದು ಎಸ್.ಐ ಪ್ರಕಾಶ್ ದೇವಾಡಿಗ ಸುದ್ದಿಗೆ ತಿಳಿಸಿದ್ದಾರೆ.

ಇದೀಗ ಮೃತದೇಹ ಸಿಕ್ಕಿದ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರು ಪತ್ನಿ ರತ್ನಾವತಿ, 2 ವರ್ಷದ ಗಂಡು ಮಗು ಹಾಗೂ ಸಹೋದರ ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.