ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿಗಿಡ ನೆಟ್ಟ ಜೆಸಿಐ ಮಡಂತ್ಯಾರು

ಮಚ್ಚಿನ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆತ್ತರದಲ್ಲಿ 2ನೇ ವರ್ಷದ ಬೇಸಿಗೆ ಶಿಬಿರವು ಜೇಸಿಐ ಮಡಂತ್ಯಾರು ಇದರ ಪ್ರಾಯೋಜಕತ್ವದಲ್ಲಿ ಏ. 8 ರಿಂದ 15 ರ ವರೆಗೆ ನಡೆಯಿತು.
ಬೇಸಿಗೆ ಶಿಬಿರದ ಸಮಾರೋಪದಂದು ಶಿಬಿರದ ನೆನಪಿಗಾಗಿ ಸಂಪಿಗೆಯ ಗಿಡವನ್ನು ಜೇಸಿಐ ಅಧ್ಯಕ್ಷ ಅರುಣ್ ಮೊರಾಸ್ ನೆಟ್ಟರು. ಬಳಿಕ ನಡೆದ ಸಮಾರೋಪ ಪೂರ್ವಾಧ್ಯಕ್ಷರಾದ ನವೀನ್ ಕೊಡ್ಲಕ್ಕೆ, ಕೋಶಾಧಿಕಾರಿ ಪ್ರಸನ್ನ ಶೆಟ್ಟಿ, ಜೆಸಿ ರೇಟ್ ಅಧ್ಯಕ್ಷೆ ಪ್ರೀತಿ ಅರುಣ್ ಮೊರಾಸ್, ಕಾರ್ಯಕ್ರಮ ಸಂಯೋಜಕ ವಿಕೇಶ್ ಮಾನ್ಯ, ಎಂ. ಆರ್ ಸುಪಾರಿ ಮಾಲಕ ಹೈದರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ವಿಶಾಲಾಕ್ಷಿ ಮೋಹನ್ ಶೆಟ್ಟಿ, ಸಹಶಿಕ್ಷಕಿ ರೂಪಾ ರುಫೀನಾ ರೊಡ್ರಿಗಸ್, ಗೀತಲತಾ, ಶಾಲಾ ನಾಯಕಿ ದಾಸಿನಿ, ಸಂಪನ್ಮೂಲ ವ್ಯಕ್ತಿ ಜಯರಾಮ್, ಪ್ರವೀಣ್ ನೆತ್ತರ, ಸುಮಂತ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ನವೀನ್ ಕೊಡ್ಲಕ್ಕೆ ಸಮಾರೋಪ ಭಾಷಣ ಮಾಡಿದರು.
ಭವ್ಯಾ ಮತ್ತು ವಿಮರ್ಶಾ ಕಾರ್ಯಕ್ರಮ ನಿರೂಪಿಸಿದರು. ಗೌರವ್ ಸ್ವಾಗತಿಸಿ, ನೇಹಾ ಶೆಟ್ಟಿ ಧನ್ಯವಾದವಿತ್ತರು. 60 ಶಿಬಿರಾರ್ಥಿಗಳು ಭಾಗವಹಿಸಿದರು. ಸಮಾರೋಪ ಸಮಾರಂಭದಲ್ಲಿ ವಿವಧ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಶಿಬಿರದ ನೇತೃತ್ವವನ್ನು ಶಾಲಾ ಮುಖ್ಯ ಶಿಕ್ಷಕ ಸೀತಾರಾಮ ನೆತ್ತರ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.