ಉಜಿರೆ ಎಸ್‌ಎಮ್‌ಎ ಮೊಹಲ್ಲಾ ಪುನಶ್ಚೇತನಾ ಶಿಬಿರ, ರಂಝಾನ್ ಕಿಟ್ ವಿತರಣೆ

ಮದರಸ ಶಿಕ್ಷಣ ಆಧುನೀಕರಣದತ್ತ ಆಡಳಿತ ಮಂಡಳಿ ಚಿಂತನೆ ನಡೆಸಬೇಕು: ಸಯ್ಯಿದ್ ಮನ್‌ಶರ್ ತಂಙಳ್

ಮದರಸ ಕಿಟ್ ಸ್ವೀಕರಿಸುತ್ತಿರುವ ಕೆರೀಂ ಕೆ.ಎಸ್ ಮತ್ತು ಬಳಗದವರು

ಉಜಿರೆ: ಕಾಲ ಡಿಜಿಟಲೀಕರಣಗೊಳ್ಳುತ್ತಿದೆ. ನಮ್ಮ ಪುಟಾಣಿ ಮಕ್ಕಳೂ ಕೂಡ ಇಂದು ಹ್ಯಾಂಡ್ರಾಯ್ಡ್ ಮೊಬೈಲ್‌ಗಳ ಮೂಲಕ ಗೂಗುಲ್ ಸರ್ಚ್ ಮಾಡುವ ಹಂತಕ್ಕೆ ಬೆಳೆದಿದ್ದಾರೆ. ಆದ್ದರಿಂದ ಅಖಿಲ ಭಾರತ ಸುನ್ನೀ ಶಿಕ್ಷಣ ಮಂಡಳಿ ರೂಪಿಸಿರುವ ಆಧುನಿಕ ಶೈಲಿಯ ಶಿಕ್ಷಣ ಪದ್ಧತಿಯನ್ನು ಇನ್ನೂ ಪರಿಣಾಮಕಾರಿಯಾಗಿ ಮಕ್ಕಳಿಗೆ ಮುಟ್ಟಿಸುವ ದೃಷ್ಟಿಯಿಂದ ಎಲ್ಲ ಮದರಸಗಳನ್ನು ಸ್ಮಾರ್ಟ್ ಮದರಗಳಾಗಿ ಆಧುನೀಕರಣಗೊಳಿಸಬೇಕಾಗಿದೆ ಎಂದು ಮನ್‌ಶರ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಯ್ಯಿದ್ ಮನ್‌ಶರ್ ತಂಙಳ್ ಹೇಳಿದರು.
ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಶನ್ (ಎಸ್‌ಎಮ್‌ಎ) ಉಜಿರೆ ರೀಜಿನಲ್ ಸಮಿತಿ ವತಿಯಿಂದ ಏ. 22 ರಂದು ಉಜಿರೆ ಹಳೆಪೇಟೆ ಮಸ್ಜಿದ್ ಸಭಾಂಗಣದಲ್ಲಿ ನಡೆದ ಮೊಹಲ್ಲಾ ಪುನಶ್ಚೇತನ ಕಾರ್ಯಾಗಾರ, ಮುಂದಿನ ಶೈಕ್ಷಣಿಕ ಸಾಲಿನ ಮದರಸ ಗೈಡ್‌ಲೈನ್ ಹಸ್ತಾಂತರ ಮತ್ತು ಧಾರ್ಮಿಕ ಗುರುಗಳಿಗೆ ರಂಝಾನ್ ಕಿಟ್- ಮತ್ತು ವಸ್ತ್ರದಾನ ನೆರವೇರಿಸಿ ಅವರು ಉಪನ್ಯಾಸ ನೀಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಉಜಿರೆ ರೀಜಿನಲ್ ಎಸ್‌ಎಮ್‌ಎ ಅಧ್ಯಕ್ಷ ಹಮೀದ್ ನೆಕ್ಕರೆ ವಹಿಸಿದ್ದರು. ಉದ್ಘಾಟನೆಯನ್ನು ಎಸ್‌ಎಮ್‌ಎ ಪುತ್ತೂರು ಜಿಲ್ಲಾಧ್ಯಕ್ಷ ಹಮೀದ್ ಹಾಜಿ ಕೊಡುಂಗೈ ನೆರವೇರಿಸಿದರು.
ವೇದಿಕೆಯಲ್ಲಿ ಎಸ್.ಎಂ ಕೋಯ ತಂಙಳ್ ಉಜಿರೆ, ಇಬ್ರಾಹಿಂ ವಾಫಿರ್ ಉಜಿರೆ, ಎ.ಎಮ್ ಶರೀಫ್ ಉಜಿರೆ, ದಾನಿ ಉಸ್ಮಾನ್ ಮೂಡಿಗೆರೆ, ಸಾದಿಕ್ ಮಾಸ್ಟರ್ ಉಮರ್ ವಿಟ್ಲ, ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ನುಅಮಾನ್ ಸಖಾಫಿ ಸ್ವಾಗತಿಸಿದರು.
ಸಮಿತಿ ಪದಾಧಿಕಾರಿಗಳು ಸಹಕಾರ ನೀಡಿದರು.
17  ಮದರಸದ 37 ಉಸ್ತಾದರುಗಳಿಗೆ ರಂಝಾನ್ ಕಿಟ್:
ಸಮಾರಂಭದಲ್ಲಿ ಉಜಿರೆ ರೀಜಿನಲ್‌ಗೊಳಪಟ್ಟ 17 ಮದರಸಗಳ 38 ಮಂದಿ ಉಸ್ತಾದರುಗಳಿಗೆ ರಂಝಾನ್ ಕಿಟ್, ಉಸ್ಮಾನ್ ಮೂಡಿಗೆರೆ ಅವರು ಕೊಡಮಾಡಿದ ಪೆರ್ನಾಲ್ ವಸ್ತ್ರದ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮದರಸಗಳ ಮುಂದಿನ ವರ್ಷದ ಕಾರ್ಯಶೈಲಿಯ ಮಾರ್ಗದರ್ಶಿ ಕಡತವನ್ನು ಎಲ್ಲಾ ಮದರಸಗಳಿಗೆ ಹಸ್ತಾಂತರಿಸಲಾಯಿತು. ಅನ್ನದಾನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.