ಡಾ| ಬಿ.ಆರ್.ಅಂಬೇಡ್ಕರ್ ರಾಷ್ಟ್ರ ನಾಯಕರು: ಹರೀಶ್ ಪೂಂಜಾ

ಬಿಜೆಪಿ ಎಸ್.ಸಿ ಘಟಕದಿಂದ ಅಂಬೇಡ್ಕರ್ ಜಯಂತಿ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ಎಸ್.ಸಿ ಮೋರ್ಚಾದ ವತಿಯಿಂದ ಡಾ| ಬಿ.ಆರ್.ಅಂಬೇಡ್ಕರ್‌ರವರ 128 ನೇ ಜನ್ಮ ದಿನಾಚರಣೆಯನ್ನು ಮಂಡಲದ ಕಛೇರಿಯಲ್ಲಿ ಎಸ್.ಸಿ ಮೋರ್ಚಾದ ಅಧ್ಯಕ್ಷ ಸದಾಶಿವ ಕರಂಬಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ದೀಪ ಬೆಳಗಿಸಿ “ನಮ್ಮೆಲ್ಲರ ನಾಯಕರಾಗಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳು ನಮಗೆ ಸ್ಪೂರ್ತಿಯಾಗಿವೆ. ಅಂಬೇಡ್ಕರ್‌ರವರ ದಲಿತರಿಗೆ ಮಾತ್ರ ನಾಯಕರಲ್ಲ ಇಡೀ ರಾಷ್ಟ್ರದ ಜನತೆಯ ನಾಯಕರು” ಎಂದರು.
ಕಾರ್‍ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರ. ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಉಪಾಧ್ಯಕ್ಷೆ ಗೀತಾ ರಾಮಣ್ಣ ಗೌಡ, ದಾಮೋದರ ಗೌಡ, ಜಿ.ಪಂ ಮಾಜಿ ಸದಸ್ಯೆ ಸಿ.ಕೆ ಚಂದ್ರಕಲಾ, ಎಸ್.ಸಿ ಮೋರ್ಚಾದ ಪ್ರಭಾರಿ ರಾಘವ ಕಲ್ಮಂಜ, ರಾಮು ಪಡಂಗಡಿ, ನಂದಕುಮಾರ್ ಪಾರೆಂಕಿ, ಕವಿತಾ, ಲಿಂಗಪ್ಪ ನಾಯ್ಕ, ಶೇಖರ ಓಡಿಲ್ನಾಳ, ಪ್ರಭಾಕರ ಆಚಾರ್‍ಯ ಸವಣಾಲು ಮೊದಲಾದವರು ಉಪಸ್ಥಿತರಿದ್ದು ಕಾರ್‍ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.