ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಸಂಪನ್ನ

ಬೆಳ್ತಂಗಡಿ: ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟು ಲ್ಲಿನ ವಾರ್ಷಿಕ ಜಾತ್ರೆ ಎ. 16 ರಿಂದ 20 ರವರೆಗೆ ತಂತ್ರಿಗಳಾದ ಕಾಜಿಮುಗೇರು ಸೀತಾರಾಮ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಅವರ ಉಪಸ್ಥಿತಿಯಲ್ಲಿ ಎ. 19 ರಂದು ರಾತ್ರಿ ಮಹಾರಥೋತ್ಸವ ಸಂಪನ್ನಗೊಂಡಿತು.
ಎ. 16 ರಂದು ಬೆಳಿಗ್ಗೆ ಧ್ವಜಾರೋಹಣ ನಡೆದು ಸಂಜೆ ವಸಂತ ಪೂಜೆ, ಕಾರ್ಕಳ ಶ್ರೀ ಭಾರ್ಗವ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಸತ್ಸಂಗ, 17 ರಂದು ಬೆಳಿಗ್ಗೆ ಉತ್ಸವ, ಸಂಜೆ ವಸಂತ ಪೂಜೆ, ರಾತ್ರಿ ಭಿಡೆ ತೋಟ ಮಕ್ಕಳಿಂದ ನೃತ್ಯ ವೈವಿಧ್ಯ, ಮಾಳದ ಚಿತ್ಪಾವನ ಬ್ರಾಹ್ಮಣ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ದೇವರ ದರುಶನ ಬಲಿ ಉತ್ಸವ, ಪಲ್ಲಕಿ ಉತ್ಸವ ನೆರವೇರಿತು. 18 ರಂದು ಬೆಳಿಗ್ಗೆ ಸ್ತಂಭ ಮಹಾಗಣಪತಿಗೆ ಅಥರ್ವಶೀರ್ಷ ಸಹಸ್ರಾವರ್ತನ ಅಭಿಷೇಕ, ಸಂಜೆ ವಸಂತ ಪೂಜೆ ಬಳಿಕ ದೇವರ ಉತ್ಸವ ನೆರವೇರಿತು.
ಎ. 19 ರಂದು ಪೂರ್ವಾಹ್ನ ರಥಾರೋಹಣ, ಮಧ್ಯಾಹ್ನ ಯಕ್ಷಭಾರತಿ ಕನ್ಯಾಡಿ ಸದಸ್ಯರಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ, ಮನೋಹರ ಪಟವರ್ಧನ್ ಬೆಂಗಳೂರು ಇವರಿಂದ ಹಿಂದೂಸ್ತಾನಿ ಗಾಯನ, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ತುಳಪುಳೆ ಅವರಿಗೆ ಸಮ್ಮಾನ, ಮಡಂತ್ಯಾರು ನಿಯತಿ ನೃತ್ಯನಿಕೇತನ ಕಲಾ ಶಾಲೆಯವರಿಂದ ನೃತ್ಯಾರ್ಪಣ, ರಾತ್ರಿ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದರ ಉಪಸ್ಥಿತಿಯಲ್ಲಿ ದೇವರ ಉತ್ಸವ, ಕೊಡಮಣಿತ್ತಾಯ ದೈವದ ನೇಮ, ಮಹಾ ರಥೋತ್ಸವ, ದೈವ _ ದೇವರ ಭೇಟಿ ಸಂಪನ್ನಗೊಂಡಿತು.
ಆಡಳಿತೆ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ ಮತ್ತು ಹಿರಿಯರಾದ ಮುರಲೀಧರ ಗೋಖಲೆ, ಶ್ರೀಕಂಠ ಮೆಹೆಂದಳೆ ಅವರ ನೇತೃತ್ವದಲ್ಲಿ ನಡೆದ ಜಾತ್ರೆಯ ವಿವಿಧ ಕಾರ್ಯಕ್ರಮಗಳಲ್ಲಿ ಪುರೋಹಿತರಾದ ಪದ್ಮನಾಭ ಜೋಶಿ, ಅಮರೇಶ ಜೋಶಿ, ವೆಂಕಟೇಶ ಗೋಖಲೆ, ಸಹಮೊಕ್ತೇಸರರಾದ ಚಂದ್ರಕಾಂತ ಗೋರೆ, ಪ್ರಕಾಶ ಜೋಶಿ, ಪುರುಷೋತ್ತಮ ತಾಮನ್ಕಾರ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.