HomePage_Banner_
HomePage_Banner_
HomePage_Banner_

ವೇಣೂರು: ವಿಶ್ವಕರ್ಮ ಪೂಜೆ-ಧಾರ್ಮಿಕಸಭೆ

Advt_NewsUnder_1

ಧಾರ್ಮಿಕ ಚಿಂತನೆಯಿಂದ ಬೌದ್ಧಿಕ ಶಕ್ತಿ ವೃದ್ಧಿ: ಜಯಕರ ಆಚಾರ್ಯ

ವೇಣೂರು: ಶ್ರೀ ವಿಶ್ವಕರ್ಮ ಸೇವಾ ಸಂಘ ವೇಣೂರು ಹಾಗೂ ಶ್ರೀ ಕಾಳಿಕಾಂಬ ಮಹಿಳಾ ಮಂಡಳಿ ವೇಣೂರು ಇದರ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಪೂಜೆ ಹಾಗೂ ವಾರ್ಷಿಕ ಮಹಾಸಭೆಯು ಕರಿಮಣೇಲು ಶ್ರೀ ವಿಶ್ವಕರ್ಮ ಸೇವಾ ಸಂಘದ ವಠಾರದಲ್ಲಿ ಜರಗಿತು.
ಮೂಡಬಿದಿರೆ ಶ್ರೀ ಗುರುಮಠ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಪುರೋಹಿತ್ ಎನ್. ಜಯಕರ ಆಚಾರ್ಯ ಅಂಕಸಾಲೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಎಳೆವೆಯಲ್ಲಿಯೇ ಸಂಸ್ಕೃತಿ, ಸಂಸ್ಕಾರದ ಬೋಧನೆಯ ಜತೆ ಧಾರ್ಮಿಕ ಚಿಂತನೆ ಮೂಡಿಸಬೇಕಿದೆ. ಧಾರ್ಮಿಕ ಚಿಂತನೆಯಿಂದ ಮಕ್ಕಳಲ್ಲಿ ಚಂಚಲತೆ ದೂರವಾಗಿ ಬೌದ್ಧಿಕ ಶಕ್ತಿ ವೃದ್ಧಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶ್ರೀ ವಿಶ್ವಕರ್ಮಾಭ್ಯುದಯ ಸಭಾದ ಅಧ್ಯಕ್ಷ ಗೋಪಾಲ ಆಚಾರ್ಯ ಲಾಲ, ರಾಯಿಯ ಶಿಲ್ಪ ಶಾಸ್ತ್ರಜ್ಞ ಹಾಗೂ ಜ್ಯೋತಿಷ್ಯರಾದ ಡಾ| ಬಿ.ಕೆ. ಮೋನಪ್ಪ ಆಚಾರ್ಯ ವೇಣೂರು ಶ್ರೀ ವಿಶ್ವಕರ್ಮ ಸೇವಾ ಸಂಘದ ಗೌರವಾಧ್ಯಕ್ಷ ಶ್ರೀಧರ ಆಚಾರ್ಯ ಖಂಡಿಗ, ಅಧ್ಯಕ್ಷ ಆನಂದ ಆಚಾರ್ಯ ಪಿಲಿಯೂರು, ಕೋಶಾಧಿಕಾರಿ ರತ್ನಾಕರ ಆಚಾರ್ಯ ಪಿಲಿಯೂರು, ಶ್ರೀ ಕಾಳಿಕಾಂಬ ಮಹಿಳಾ ಮಂಡಳಿ ಅಧ್ಯಕ್ಷೆ ಯಶೋಧ ಶ್ರೀಧರ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಮೂಡಬಿದಿರೆಯ ಕೇಶವ ಪುರೋಹಿತ್ ಅವರು ಪೂಜಾವಿಧಿವಿಧಾನ ನೆರವೇರಿಸಿದರು.
ರಾಯಿಯ ಶಿಲ್ಪ ಶಾಸ್ತ್ರಜ್ಞ ಹಾಗೂ ಜ್ಯೋತಿಷ್ಯರಾದ ಡಾ| ಬಿ.ಕೆ. ಮೋನಪ್ಪ ಆಚಾರ್ಯ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಸೀತಾರಾಮ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಶ್ರೀ ಕಾಳಿಕಾಂಬ ಮಹಿಳಾ ಮಂಡಳಿ ಕಾರ್ಯದರ್ಶಿ ಪ್ರಮೀಳ ಭಾಸ್ಕರ ಆಚಾರ್ಯ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.