ಯುವ ಮರಾಟೆ ಸೇವಾ ಸಂಘದ ಮಾಸಿಕ ಸಭೆ

ಬೆಳ್ತಂಗಡಿ ತಾಲೂಕು ಯುವ ಮರಾಟೆ ಸೇವಾ ಸಂಘ  ಇದರ 16ನೇ ಮಾಸಿಕ ಸಭೆಯು ಕಾರ್ಯಕಾರಿ ಸಮಿತಿ ಸದಸ್ಯ ರವಿ ಕುಮಾರ್ ಅರಳಿ, ಕಾಶಿಬೆಟ್ಟು ಇವರ ನಿವಾಸದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ವಹಿಸಿದ್ದರು. ಪ್ರಶಾಂತ್ ನಾಯ್ಕ ತೆಂಕಕಾರಂದೂರು ಹಿಂದಿನ ಸಭೆಯ ವರದಿ ವಾಚಿಸಿದರು. ಸಂಘದ ಕಾರ್ಯದರ್ಶಿ ಪ್ರಸಾದ್ ನಾಯ್ಕ ಕುವೆಟ್ಟು ಸ್ವಾಗತಿಸಿ, ವಾಸುದೇವ ನಾಯ್ಕ ಧನ್ಯವಾದ ಅರ್ಪಿಸಿದರು. ಸಭೆಯ ಬಳಿಕ ರವಿ ಕುಮಾರ್ ಹಾಗೂ ಶುಭಾ ದಂಪತಿಯ ಪುತ್ರ ರಕ್ಷತ್ ಇವರ ಹುಟ್ಟು ಹಬ್ಬ ಆಚರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.