ಧರ್ಮಸ್ಥಳ: ಇಲ್ಲಿಯ ಮುಂಡ್ರುಪ್ಪಾಡಿ ಎಂಬಲ್ಲಿ ವಿವಾಹಿತೆಯೋರ್ವಳು ತನ್ನ ತಾಯಿಮನೆಗೆ ಮತದಾನಕ್ಕೆಂದು ಬಂದ ಸಂದರ್ಭದಲ್ಲಿ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಎ.18 ರಂದು ನಡೆದಿದೆ.
ಧರ್ಮಸ್ಥಳದ ಮುಂಡ್ರುಪ್ಪಾಡಿ ಚಂದ್ರಗಿರಿ ನಿವಾಸಿ ಧನಕೀರ್ತಿಯವರ ಪುತ್ರಿ ನಿರತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ನಿರತಾ ರವರನ್ನು ಐದುವರ್ಷಗಳ ಹಿಂದೆ ಮೂಡಬಿದ್ರೆಗೆ ವಿವಾಹಮಾಡಿಕೊಡಲಾಗಿದ್ದು, ಇವರ ಪತಿ ಉದ್ಯೋಗದಲ್ಲಿದ್ದರು. ಮಕ್ಕಳಾಗಿಲ್ಲ ಎನ್ನುವ ಚಿಂತೆಯಲ್ಲಿ ಕೊರಗುತ್ತಿದ್ದ ಇವರು, ಈ ಹಿಂದೆ ತಮ್ಮ ಸಹೋದರನಿಗೆ ಕರೆ ಮಾಡಿ ತನಗೆ ಜೀವನದಲ್ಲಿ ಜಿಗುಪ್ಸೆಯಾಗಿರುವುದಾಗಿ ತಿಳಿಸಿದ್ದರು
ಎ.18 ರಂದು ಮತದಾನ ಮಾಡಲೆಂದು ಧರ್ಮಸ್ಥಳದಲ್ಲಿರುವ ತಮ್ಮ ತಾಯಿಮನೆಗೆ ಬಂದಿದ್ದ ಅವರು ಮತಚಲಾಯಿಸಿ ನಂತರ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.