ಬಡಿಕೋಡಿಯಲ್ಲಿ ಕೈಕೊಟ್ಟ ಮತಯಂತ್ರ

ನಕ್ಸಲ್ ಪೀಡಿತ ಪ್ರದೇಶಗಳಿಗೆ ಬಿಗಿ ಭದ್ರತೆ

ವೇಣೂರು: ಎ.18ರಂದು ನಡೆದ ಲೋಕಸಭಾ ಚುನಾವಣೆಯ ವೇಣೂರು ಹಾಗೂ ನಾರಾವಿ ಪ್ರದೇಶದ ಹೆಚ್ಚಿನ ಬೂತ್‌ಗಳಲ್ಲಿ ವಿಳಂಬವಾಗಿ ಚುನಾವಣೆ ಪ್ರಾರಂಭಗೊಂಡಿತ್ತಾದರೂ ಯಾವುದೇ ಅಹಿತಕರ ಘಟನೆಗಳು ನಡೆಯದೆ ಸಾಂಗವಾಗಿ ನಡೆಯಿತು.
ಮುಂಜಾನೆಯಿಂದಲೇ ಮತದಾರರು ಮತದಾನಕೇಂದ್ರದಲ್ಲಿ ಜಮಾಯಿಸಿ ತಮ್ಮ ಹಕ್ಕನ್ನು ಚಲಾಯಿಸಲು ಸರತಿಸಾಲಿನಲ್ಲಿ ನಿಂತುಕೊಂಡಿದ್ದರು. ಬಡಕೋಡಿಯಲ್ಲಿ ಬೆಳಿಗ್ಗೆ9 ಗಂಟೆಗೆ ಮತಯಂತ್ರ ಕೈಕೊಟ್ಟಿದ್ದು, ಬಳಿಕ ಬೇರೆ ಮತಯಂತ್ರವನ್ನು ತಂದು ಅಳವಡಿಸಲಾಯಿತು. ಸುಮಾರು ಒಂದು ತಾಸಿಗೂ ಅಧಿಕ ಸಮಯ ವ್ಯರ್ಥವಾಗಿದ್ದರಿಂದ ಮತದಾರರು ಸರತಿಸಾಲಿನಲ್ಲೇ ಕಾಯುವಂತಾಯಿತು. ಬಳಿಕ ಅಳವಡಿಸಲಾದ ಮತಯಂತ್ರವೂ ಕೆಲ ಗೊಂದಲವನ್ನು ಉಂಟು ಮಾಡಿದರೂ ಬಳಿಕ ಸರಿಯಾಗಿ ಕಾರ್ಯನಿರ್ವಹಿತು. ಮತಗಟ್ಟೆ ಕೇಂದ್ರದ ಒಳಗೆ ಖಾಸಗಿ ವಾಹನಗಳನ್ನು ಬಿಡಲಾಗುವುದಿಲ್ಲ ಎಂಬ ಮಾಹಿತಿ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದರ ಪರಿಣಾಮ ಕೆಲವು ವೃದ್ಧರನ್ನು ಗೇಟ್ ಬಳಿಯೇ ಇಳಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು. ನಕ್ಸಲ್ ಪೀಡಿತ ಪ್ರದೇಶವಾದ ನಾರಾವಿ, ಕುತ್ಲೂರು ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.