ವೇಣೂರು: 15 ವರ್ಷದ ಬಳಿಕ ಮತದಾನ!

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದ ವ್ಯಕ್ತಿ ಚಿಕಿತ್ಸೆ ಪಡೆದು ಆಶ್ರಮಸೇರಿ ಇದೀಗ ಸುಮಾರು 15 ವರ್ಷಗಳ ಬಳಿಕ ಲೋಕಸಭಾ ಚುನಾಚಣೆಯಲ್ಲಿ ಮತ ಚಲಾಯಿಸಿದವರು 67 ವರ್ಷದ ಅಚ್ಚುತ ಪೂಜಾರಿ.
ಗುಂಡೂರಿ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ವಾಸವಾಗಿರುವ ಇವರು ಸರಿಯಾಗಿ ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಇವರು ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಅವರ ಸಹಕಾರದೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ನಿರ್ಗತಿಕರಾಗಿ ಮಾನಸಿಕ ಅಸ್ವಸ್ಥರಾಗಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಅಚ್ಚುತ ಪೂಜಾರಿಯವರನ್ನು ಸೇವಾಶ್ರಮದ ಮೂಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆಶ್ರಮಕ್ಕೆ ಕರೆತರಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.