HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ನಳಿನ್ ಗೆಲುವಿಗಾಗಿ ಬೆಳ್ತಂಗಡಿ ನಗರದಲ್ಲಿ ಬಿಜೆಪಿ ನಾಯಕರ ಪಾದಯಾತ್ರೆ.

ಬೆಳ್ತಂಗಡಿ: ಲೋಕಸಭಾ ಚುನಾವಣೆ ಪ್ರಯುಕ್ತ ದ. ಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಗೆಲುವಿಗಾಗಿ ಬೆಜಿಪಿ ಬೆಳ್ತಂಗಡಿ ನಗರ ಸಮಿತಿ ಹಮ್ಮಿಕೊಂಡಿದ್ದ ರೋಡ್‌ಶೋ, ನಗರ ಪಾದಯಾತ್ರೆ ಏ. 16  ರಂದು ಬೆಳ್ತಂಗಡಿಯಲ್ಲಿ ನಡೆಯಿತು.
ಬೆಳ್ತಂಗಡಿ ಸಂತೆಕಟ್ಟೆಯಿಂದ ಮೋದಿ…ಮೋದಿ...ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಬಿರುಬಿಸಿಲನ್ನೂ ಲೆಕ್ಕಿಸದೆ ವಿಜಯ ಸಂಕಲ್ಪ ನಡಿಗೆ ನಡೆಸಿದರು. ಬೆಳ್ತಂಗಡಿಯಲ್ಲಿ ನಡಿಗೆ ಮುಗಿಸಿ ಬಳಿಕ ಉಜಿರೆ ಪೇಟೆಯಲ್ಲೂ ಕೂಡ ಪಾದಯಾತ್ರೆ ಹಮ್ಮಿಕೊಂಡರು.
ಈ ಪಾದಯಾತ್ರೆಯಲ್ಲಿ ಶಾಸಕ ಹರೀಶ್ ಪೂಂಜ, ಬಿ.ಜೆ.ಪಿ ವಿಭಾಗೀಯ ಸಹ ಪ್ರಭಾರಿ ಪ್ರತಾಪ್‌ಸಿಂಹ ನಾಯಕ್, ಜಿಲ್ಲಾ ಕಾರ್ಯದರ್ಶಿ ಕೊರಗಪ್ಪ ನಾಯಿಕ, ಚುನಾವಣಾ ಉಸ್ತುವಾರಿ ಬಾಲಕೃಷ್ಣ ಶೆಟ್ಟಿ ಸವಣಾಲು, ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪ.ಪಂ ಸದಸ್ಯರಾದ ಜಯಾನಂದ ಗೌಡ, ಶರತ್ ಕುಮಾರ್, ಅಂಬರೀಶ್, ತುಳಸಿ ಮತ್ತು ರಜನಿ ಕುಡ್ವ, ಜಿ.ಪಂ ಸದಸ್ಯೆ ಮಮತಾ ಎಂ.ಶೆಟ್ಟಿ, ಮಾಜಿ ಜಿ.ಪಂ ಸದಸ್ಯೆ ಸಿ.ಕೆ.ಚಂದ್ರಕಲಾ, ತಾ.ಪಂ ತಾ.ಪಂ ಉಪಾಧ್ಯಕ್ಷೆ ವೇದಾವತಿ, ಮಾಜಿ ಉಪಾಧ್ಯಕ್ಷ ಸಂತೋಷ್ ಲಾಯಿಲ, ತಾ.ಪಂ ಸದಸ್ಯ ಸುಧಾಕರ ಲಾಯಿಲ, ತಾ.ಪಂ ಮಾಜಿ ಸದಸ್ಯೆ ವಿಮಲಾ ಉಜಿರೆ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್ ಡೊಂಗ್ರೆ, ಜಗದೀಶ್ ಕನ್ನಾಜೆ, ಅರವಿಂದ, ಬಾಲಕೃಷ್ಣ ಬಿರ್ಮೊಟ್ಟು, ಕಳಿಯ ಸೊಸೈಟಿ ಅಧ್ಯಕ್ಷ ವಸಂತ ಮಜಲು, ಗುತ್ತಿಗೆದಾr ರಾಜ್ ಪ್ರಕಾಶ್, ದೇವಿಪ್ರಸಾದ್, ಗ್ರಾ.ಪಂ ಸದಸ್ಯ ಮೋಹನ್‌ದಾಸ್, ಎಪಿಎಂಸಿ ಸದಸ್ಯ ಈಶ್ವರ್‌ಬೈರ ಮೊದಲಾದವರು ಭಾಗಿಯಾಗಿದ್ದರು.

Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.