ಬೆಳಾಲು: 37ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಬೆಳಾಲು: ಸಾಮೂಹಿಕ ಶ್ರೀ ಸತ್ಯನಾರಯಣ ಪೂಜಾ ಸಮಿತಿ ಬೆಳಾಲು ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 37ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಎ.14 ರಂದು ಶ್ರೀ ಧ.ಮಂ.ಪ್ರೌಢ ಶಾಲೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ, ಉಜರೆ ವಲಯದ ಮೇಲ್ವಿಚಾರಕಿ ಅಶ್ವಿತಾ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಬೆಳಾಲು ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಗೌಡ, ಸಾರ್ವಜನಿಕ ಗಣೇಶೊತ್ಸವ ಸಮಿತಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಉಪ್ಪಾರು, ಬೆಳಾಲು ಗ್ರಾ.ಪಂ ಮಾಜಿ ಸದಸ್ಯ ಪೆರಣಗೌಡ, ಶಿಲ್ಪಿ ಶಶಿಧರ ಆಚಾರ್ಯ ಶಾಂತಿನಗರ, ಅರ್ಚಕ ದುರ್ಗಾಪ್ರಸಾದ್ ಮತ್ತು ಇತರರು, ಒಕ್ಕೂಟದ ಅಧ್ಯಕ್ಷರುಗಳಾದ ರತ್ನಾಕರ ಆಚಾರ್ಯ ಬೆಳಾಲು, ಯೋಗೀಶ ಗೌಡ ಕೊಲ್ಪಾಡಿ, ಶಿವಪ್ಪ ಗೌಡ ಮಾಯಾ, ಸೇವಾಪ್ರತಿನಿಧಿ ಕು| ಆಶಾ, ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರುಗಳು, ವಿವಿಧ ಭಜನಾ ಮಂಡಳಿಗಳ ಪದಾದಿಕಾರಿಗಳು, ಸದಸ್ಯರು, ಇನ್ನಿತರರು ಹಾಜರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.