ಬೆಳ್ತಂಗಡಿ: ಕೆಥೋಲಿಕ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಿಂದ ಆರ್ಥಿಕ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಕಳೆದ 20 ವರ್ಷಗಳಿಂದ ಬಡ, ನೊಂದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದು, ಈ ಬಾರಿಯೂ ಬೆಳ್ತಂಗಡಿಯ ವಿಲೀನ ನೀಷ್ಮಾ ಡಿ’ಸೋಜ ಬಾಯಿಯವರ ಶಸ್ತ್ರಚಿಕಿತ್ಸೆಗೆ, ಪ್ರಿಯಾ ಡಿ’ಸೋಜಾ ರವರಿಗೆ ರಕ್ತದ ಸಮಸ್ಯೆಗೆ ಹಾಗೂ ಉಗ್ಗಪ್ಪ ಪೂಜಾರಿ ಇವರಿಗೆ ಮನೆ ದುರಸ್ಥಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಬಡಕುಟುಂಬದ ಕಣ್ಣೊರೆಸಿದೆ.
ಈ ಸಾಮಾನ್ಯ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಲೋಶಿಯಸ್ ಲೋಬೋ, ಜಾನ್ ಅರ್ವಿನ್ ಡಿಸೋಜಾ, ಲಾರೆನ್ಸ್ ಡಿಸೋಜಾ, ಜೋಸ್ಪಿನ್ ಪಿಂಟೊ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಲ್ಟರ್ ಡಿಸೋಜಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವೈಯುಕ್ತಿಕ ನೆಲೆಯಲ್ಲಿ ನಿರ್ದೇಶಕ ಎಲೋಶಿಯಸ್ ಲೋಬೋ ರವರು ಆರ್ಥಿಕ ನೆರವು ನೀಡಿದರು. ನಿರ್ದೇಶಕ ಜೋನ್ ಅರ್ವಿನ್ ಡಿ’ಸೋಜಾ ಸ್ವಾಗತಿಸಿ, ನಿರ್ದೇಶಕ ಎಲೋಶಿಯಸ್ ಲೋಬೊ ಹಿತನುಡಿಗಳನ್ನಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.