ಕಸಾಪ ಸಹಭಾಗಿತ್ವದೊಂದಿಗೆ “ಸಂಧಿ- ಸಂಕಥನ” ನೇಜಿ ಹಾಡುಗಳ ಕಲಿಕೆ ಶಿಬಿರ

ಜಾನಪದ ಪರಂಪರೆ ಪೀಳಿಗೆಗೆ ದಾಟಿಸುವ ಮಹತ್ತರ ಕಾರ್ಯ: ಡಾ. ಬಿ.ಪಿ ಸಂಪತ್ ಕುಮಾರ್

ಉಜಿರೆ: ಪಾರಂಪರಿಕ ಜೀವನ ಮೌಲ್ಯಗಳು ಅವನತಿಯ ಹಾದಿಯಲ್ಲಿದ್ದು ತುಳುನಾಡ ನಾಟಿ, ಕೃಷಿಪರಂಪರೆ, ಅದರ ಜೊತೆಗೆ ಜೋಡಿಸಿಕೊಂಡಿದ್ದ ಅನೇಕ ಜಾನಪದ ಕಲಾಪ್ರಾಕಾರಗಳು ನಶಿಸಿಹೋಗುತ್ತಿದ್ದು ಅದನ್ನುಮುಂದಿನ ಪೀಳಿಗೆಗೆ ದಾಟಿಸುವ ಮಹತ್ತರ ಕಾರ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವ ನೀಡುತ್ತಿರುವುದು ಆಶಾದಾಯಕ ಎಂದು ಉಜಿರೆ ಎಸ್‌ಡಿಎಂ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ. ಪಿ ಸಂಪತ್ ಕುಮಾರ್ ಹೇಳಿದರು.
ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆಯಲ್ಲಿ ಏ. 13 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಲೇಜಿ ಕನ್ನಡ ಸಂಘಗಳ ಸಹಭಾಗಿತ್ವದೊಂದಿಗೆ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಸಂಧಿ-ಸಂಕಥನ ನೇಜಿ ಹಾಡುಗಳ ಕಲಿಕೆ ಶಿಬಿರದ ಅಧ್ಯಕ್ಷತೆಯಿಂದ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ರೇವತಿ ಮತ್ತು ಗುಲಾಬಿ ಬಜಿಲ ಕಲಿಕೆ ಶಿಬಿರಕ್ಕೆ ದೀಪ ಬೆಳಗಿ ಚಾಲನೆ ನೀಡಿದರು.
ಕೆಲವೊಂದು ಸ್ಪರ್ಧೆಗಳ ಕಾರಣಕ್ಕಾಗಿ ಕೆಲವು ಕನ್ನಡ ಜನಪದೀಯ ವಿಚಾರಗಳು ಇಂದು ಚಾಲ್ತಿಯಲ್ಲಿದ್ದರೂ ಕರಾವಳಿ ತುಳು ಭಾಷೆಯ ಜಾನಪದ ವಿಚಾರಗಳು ಸಂಪೂರ್ಣ ಮಾಯದ ಸ್ಥಿತಿ ಎದುರಿಸುತ್ತಿದೆ. ಗದ್ದೆಗಳಲ್ಲಿ ಕೇಳುತ್ತಿದ್ದ ನೇಜಿ ಹಾಡುಗಳಲ್ಲಿ ಒಂದು ಸಂಸ್ಕೃತಿಯ ಪರಿಚಯವನ್ನೇ ಮೂಡಿಸುವಂತಹದ್ದು. ಗದ್ದೆಗಳೇ ಇಲ್ಲದಾದಾಗ ಅಲ್ಲಿರುವ ಸಂಸ್ಕೃತಿಗಳು ಇಲ್ಲದಾಗುತ್ತಿವೆ. ಆ ನಿಟ್ಟಿನಲ್ಲಿ ಈ ಶಿಬಿರದಲ್ಲಿ ಅಂತಹಾ ಪ್ರಯೋಗವೊಂದನ್ನು ಕಸಾಪ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವುದು ಸ್ಲಾಘನೀಯ ಎಂದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯೂ ಆಗಿರುವ ತಾ| ಕಸಾಪ ಅಧ್ಯಕ್ಷ ಡಾ. ಬಿ ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೋ. ಟಿ,ಎನ್ ಕೇಶವ್, ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಕೆ ರಾಮಕೃಷ್ಣ ಭಟ್ ಚೊಕ್ಕಾಡಿ ಸ್ವಾಗತಿಸಿದರು. ಸಂಯೋಜಕ ಡಾ. ಎಂ.ಪಿ ಶ್ರೀನಾಥ್ ವಂದಿಸಿದರು. ಪ್ರಾಧ್ಯಾಪಕ ಡಾ. ದಿವ ಕೊಕ್ಕಡ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.