ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಪದಗ್ರಹಣ, ರಾಷ್ಟ್ರೀಯ ಅಧ್ಯಕ್ಷರ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ದಾರಿ ತಪ್ಪುವ ಯುವ ಜನತೆಗೆ ನೈತಿಕ ಮೌಲ್ಯ ತುಂಬುವ ಕೆಲಸ ಹಿರಿಯರಿಂದ ಆಗಬೇಕು: ಬಿಷಪ್ ಲಾರೆನ್ಸ್ ಮುಕ್ಕುಝಿ


ಬೆಳ್ತಂಗಡಿ: ಹಿರಿಯರು ಎಂದರೆ ತಿರಸ್ಕೃತರು ಎಂಬ ಭಾವನೆ ಇದ್ದಂತಿದೆ. ಅವರು ಈ ನಾಡಿನ ಏಳಿಗೆಗಾಗಿ ತನ್ನ ಯವ್ವನದಲ್ಲಿ ಶ್ರಮಿಸಿದವರು. ಇಂದಿನ ಪೀಳಿಗೆಯ ಸಂತೋಷಕ್ಕಾಗಿ ದುಡಿದವರು. ನಿಮ್ಮ ಮಾರ್ಗದರ್ಶನ ಈ ಸಮಾಜಕ್ಕೆ ಅಗತ್ಯವಾಗಿದೆ. ನಿಮ್ಮ ಪಾಂಡಿತ್ಯ ಮತ್ತು ಅನುಭವದ ಮೂಲಕ ಇಂದಿನ ದಾರಿ ತಪ್ಪುತ್ತಿರುವ ಯುವ ಸಮಾಜಕ್ಕೆ ನೈತಿಕ ಮೌಲ್ಯ ತುಂಬುವ ಕಾರ್ಯ ನಿಮ್ಮಿಂದ ಆಗಬೇಕಾಗಿದೆ ಎಂದು ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡಾ. ಲಾರೆನ್ಸ್ ಮುಕ್ಕುಝಿ ಹೇಳಿದರು.
ಬೆಳ್ತಂಗಡಿ ಎಸ್‌ಡಿಎಂ ಕಲಾಭವನದ ಪಿನಾಕಿ ಸಭಾಂಗಣದಲ್ಲಿ ಏ. 13 ರಂದು ನಡೆದ ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಇದರ ನೂತನ ಸಮಿತಿ ಪದಗ್ರಹಣ ಮತ್ತು ಸೀನಿಯರ್ ಛೇಂಬರ್ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸೀನಿಯರ್‌ಗಳ ವಯಸ್ಸಾಯಿತು ಎಂದು ಧೃತಿಗೆಡಬಾರದು. ಇಲ್ಲದ ಚಿಂತೆ ತಂದುಕೊಂಡು ದುಶ್ಚಟಗಳಿಗೆ ಬಲಿಬೀಳಬಾರದು. ಕಿರಿಯರ ಸ್ವಾತಂತ್ರ್ಯಕ್ಕೆ ಧಕ್ಕೆ ತಾರದೆ ಕಾಲದ ಬದಲಾವಣೆಗೆ ಒಗ್ಗಿಕೊಂಡು ಸಮಾಜದ ಜೊತೆ ಬೆರೆತು ಈ ರೀತಿ ಸಂಘಟನೆಗಳ ಮೂಲಕ ಪರಸ್ಪರ ಅಭಿಪ್ರಾಯಗಳನ್ನು ಸುಖ ದುಃಖಗಳನ್ನು ಹಂಚಿಕೊಂಡು ಸಂತೋಷ ಪಡಬೇಕು ಎಂದು ಅವರು ತಿಳಿಸಿದರು.
ಪದಗ್ರಹಣ ಅಧಿಕಾರಿಯಾಗಿದ್ದ ಸೀನಿಯರ್ ಛೇಂಬರ್ ರಾಷ್ಟ್ರೀಯ ಉಪಾಧ್ಯಕ್ಷ ಮುರಳೀಧರನ್ ಕೆ ನೂತನ ಅಧ್ಯಕ್ಷರ ಪದಗ್ರಹಣ ಪ್ರತಿಜ್ಞೆ ನಿರ್ವಹಿಸಿ ಘಟಕಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಂಶುಪಾಲ ಪ್ರೋ. ಟಿ.ಎನ್ ಕೇಶವ ಮತ್ತು ರಾಷ್ಟ್ರೀಯ ಸಂಯೋಜಕ ಡಾ. ಅರವಿಂದ ರಾವ್ ಕೇದಗೆ ಶುಭ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಘಟಕದ ಸ್ಥಾಪಕ ಅಧ್ಯಕ್ಷ ಡಾ. ಪ್ರಮೋದ್ ಆರ್ ನಾಯಕ್ ಸ್ವಾಗತಿಸಿ ಮಾತನಾಡಿ, ಬಳಿಕ ತನ್ನ ಘಟಕದ ಎಲ್ಲ ಸದಸ್ಯರ ವೈಯಕ್ತಿಕ ಕಾರ್ಯತತ್ಪರತೆಯನ್ನು ರಾಮಾಯಣ ಕಥೆಗೆ ಹೋಲಿಸಿ ಎಲ್ಲರಿಗೂ ಮನಸ್ಸಿಗೊಪ್ಪುವಂತೆ ಸುಂದರವಾಗಿ ಬಿಚ್ಚಿಟ್ಟರು.
ನ್ಯಾಷನಲ್ ಇನ್ಶೂರೆನ್ಸ್ ಅಭಿವೃದ್ಧಿ ಅಧಿಕಾರಿ ಜೋನ್ ಅರ್ವಿನ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಯಶವಂತ ಪಟವರ್ಧನ್, ಸಂಜೀವ ಶೆಟ್ಟಿ ಕುಂಟಿನಿ, ಮಂಜುನಾಥ ರೈ ಎನ್, ಲೇನ್ಸಿ ಎ ಪಿರೇರಾ ಮತ್ತು ರಾಜಾರಾಮ ರಾವ್ ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವರದಿ ವಾಚಿಸಿದರು.
ನೂತನ ಅಧ್ಯಕ್ಷ ಪಿ.ಪಿ ಜೋಯ್, ಕಾರ್ಯದರ್ಶಿ ಚಂದ್ರಹಾಸ ಕೇದೆ, ಕೋಶಾಧಿಕಾರಿ ಯಶವಂತ ಪಟವರ್ಧನ್ ಇವರು ನಿರ್ಗಮಿತ ಅಧ್ಯಕ್ಷ ಡಾ. ಪ್ರಮೋದ್ ಆರ್ ನಾಯಕ್, ಕಾರ್ಯದಿರ್ಶಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಎನ್ ಅವರಿಂದ ಅಧಿಕಾರ ಪದ ಪಡೆದರು. ನೂತನ ಅಧ್ಯಕ್ಷರು ತನ್ನ ಮಂಡಳಿಯ ಎಲ್ಲಾ ಸದಸ್ಯರಿಗೂ ಪದಗ್ರಹಣ ಪ್ರತಿಜ್ಞೆ ಬೋಧಿಸಿದರು.
ಸನ್ಮಾನ: ಆಶೀರ್ವಚನ ನೀಡಲು ಆಗಮಿಸಿದ್ದ ಬಿಷಪ್ ಲಾರೆನ್ಸ್ ಮುಕ್ಕುಝಿ ಅವರ ಸಾಮಾಜಿಕ ಸೇವೆಗಳನ್ನು ಪರಿಗಣಿಸಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಅಧಿಕೃತ ಭೇಟಿ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಅಜಿತ್ ಮೆನನ್ ಅವರನ್ನು ಅಭಿನಂದಿಸಲಾಯಿತು. ರಾಷ್ಟ್ರೀಯ ಕಾರ್ಯಕಾರಿ ಮಂಡಳಿಗೆ ನೇಮಕಗೊಂಡಿರುವ ಪೂರ್ವಾಧ್ಯಕ್ಷ ಡಾ. ಪ್ರಮೋದ್ ಆರ್ ನಾಯಕ್ ಅವರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.