ತಾಲೂಕಿನಾದ್ಯಂತ ಕ್ರೈಸ್ತ ಬಾಂಧವರಿಂದ ಗರಿಗಳ ಭಾನುವಾರ ಆಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಕ್ರೈಸ್ತರು ಪವಿತ್ರವಾರ ಆಚರಿಸುವ ಮುಂದಿನ ಭಾನುವಾರ ಎ.14 ರಂದು ಗರಿಗಳ ಭಾನುವಾರ(ಪಾಮ್ ಸಂಡೇ) ಭಕ್ತಿಯಿಂದ ಆಚರಿಸಲಾಯಿತು.
ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದಾಗ ಭಕ್ತರು ಆಲಿವ್ ಮರದ ಗರಿಗಳನ್ನು ಹಿಡಿದು ಸ್ವಾಗತಿಸುವ ಸಂಕೇತವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಈ ದಿನವನ್ನು ಆಚರಿಸಿದರು. ಉಜಿರೆ ಸಂತ ಅಂತೋನಿ ಚರ್ಚ್‌ನಲ್ಲಿ ಬೆಳಿಗ್ಗೆ ಚರ್ಚಿನ ಗ್ರೆಟ್ಟೊ ಬಳಿ ಗರಿಗಳನ್ನು ಶುದ್ಧೀಕರಿಸಿ ನಂತರ ಮೆರವಣಿಗೆ ಮೂಲಕ ಚರ್ಚ್ ತೆರಳಿ ವಿಶೇಷ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಚರ್ಚ್ ಪ್ರಧಾನ ಧರ್ಮಗುರು ವಂ.ಫಾ| ಜೇಮ್ಸ್ ಡಿಸೋಜ, ಸಹಾಯಕ ಧರ್ಮಗುರು ವಂ. ಫಾ| ಉದಯ್ ಜೋಸೆಫ್ ಫೆರ್ನಾಂಡಿಸ್, ಸಮಸ್ತ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.