ಮತದಾನದ ಪ್ರಯುಕ್ತ ಮಂಗಳೂರು-ಬೆಂಗಳೂರು ಹೆಚ್ಚುವರಿ ರಾತ್ರಿರೈಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎ.17 ಮತ್ತು 18 ರಂದು ಬೇಡಿಕೆ ಹಿನ್ನಲೆಯಲ್ಲಿ ಮತದಾನಕ್ಕೆ ಅನುಕೂಲವಾಗಲು ವ್ಯವಸ್ಥೆ

ಬೆಳ್ತಂಗಡಿ: ಎ.18ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಮತದಾನ ಮಾಡುವವರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಎ.17 ಮತ್ತು 18 ರಂದು ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರಾತ್ರಿ ರೈಲು ಓಡಿಸಲು ನೈರುತ್ಯ ರೈಲ್ವೇ ಎ.12 ರಂದು ಅಧಿಸೂಚನೆ ಹೊರಡಿಸಿದೆ.
ಮತದಾನ ಹಾಗೂ ಶಾಲಾ ಮಕ್ಕಳ ರಜೆಯ ಕಾರಣ ಪ್ರಸ್ತಾವಿತ ದಿನಾಂಕಗಳ ರಾತ್ರಿ ರೈಲುಗಳ ಟಿಕೆಟ್ ಆಗಲೇ ಬುಕ್ ಆಗಿದೆ. ಬಸ್ ಹಾಗೂ ವಿಮಾನ ಪ್ರಯಾಣ ದರ ದುಪ್ಪಟ್ಟು ಏರಿಕೆ ಹಿನ್ನಲೆಯಲ್ಲಿ ಮತದಾನ ಹಿಂದಿನ ದಿನ ಮಿತವ್ಯಯದ ರೈಲು ಪ್ರಯಾಣಕ್ಕೆ ಅಧಿಕ ಬೇಡಿಕೆ ಕಂಡು ಬಂದಿದೆ.
ಬೆಂಗಳೂರು ಮಹಾನಗರ ಹಾಗೂ ಆಸುಪಾಸಿನ ನಗರಗಳಲ್ಲಿ ಉದ್ಯೋಗ ನಿಮಿತ್ತ ಕರಾವಳಿಯ ದ.ಕ, ಉಡುಪಿ ಹಾಗೂ ಕಾಸರಗೂಡು ಜಿಲ್ಲೆಗಳ ಲಕ್ಷಾಂತರ ಜನರು ನೆಲೆಸಿದ್ದು, ಅವರಿಗೆ ಮತದಾನದ ಹಿಂದಿನ ದಿನ ಬೆಂಗಳೂರು-ಮಂಗಳೂರಿನ ನಡುವೆ ಹೆಚ್ಚುವರಿ ರಾತ್ರಿ ರೈಲು ಒದಗಿಸುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ.

ಯಶವಂತಪುರದಿಂದ ಪ್ರಯಾಣ: ಯಶವಂತಪುರ-ಕಾರವಾರ-ಯಶವಂತಪುರ ತತ್ಕಾಲ್ ವಿಶೇಷ ರೈಲು ಎ.17 ರಂದು ರಾತ್ರಿ 10 ಗಂಟೆಗೆ ಯಶವಂತಪುರದಿಂದ ಪ್ರಯಾಣ ಆರಂಭಿಸಿ ಎ.18 ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರು ಸೆಂಟ್ರಲ್, 10.15ಕ್ಕೆ ಉಡುಪಿ, 10.50ಕ್ಕೆ ಕುಂದಾಪುರ ಮತ್ತು ಮದ್ಯಾಹ್ನ 3.30 ಕ್ಕೆ ಕುಂದಾಪುರ ತಲುಪಲಿದೆ.
ಇದೇ ರೈಲು ಏ.18 ರಂದು ಸಂಜೆ 6 ಗಂಟೆಗೆ ಕಾರವದಿಂದ ಪ್ರಯಾಣ ಆರಂಭಿಸಿ ರಾತ್ರಿ 8.50ಕ್ಕೆ ಕುಂದಾಪುರ, 9.30 ಕ್ಕೆ ಉಡುಪಿ, 1.10ಕ್ಕೆ ಮಂಗಳೂರು ಸೆಂಟ್ರಲ್ ಮತ್ತು ಏ.19 ರಂದು ಬೆಳಿಗ್ಗೆ 10.35 ಕ್ಕೆ ಯಶವಂತಪುರ ತಲುಪಲಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.