ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ

 

ಬಳಂಜ:  ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾಮಹೋತ್ಸವವು ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆ ಯಿಂದ ಜರುಗಿತು.

 

ಎ.12 ರಂದು ಬೆಳಿಗ್ಗೆ ಸುಮುಹೂರ್ತದಲ್ಲಿ ಕವಾಟೋದ್ಘಾಟನೆ, ದಿವ್ಯದರ್ಶನ ದಶವಿಧ ಸ್ನಾನ, ಪಂಚಾಮೃತಭಿಷೇಕ, ಕಲಶಾಭಿಷೇಕ, ಮಹಾಪೂಜೆ, ಚೂರ್ಣೋತ್ಸವ, ಪಲ್ಲಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ 7 ರಿಂದ ಬಳಂಜ ಗುತ್ತುವಿನಿಂದ ದೈವಗಳ ಭಂಡಾರ ಬಂದು, ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಿತು. ದೈವ ಮತ್ತು ದೇವರ ಭೇಟಿ, ಶ್ರೀ ದೇವರ ಅವಭೃತ, ಧ್ವಜಾ ಅವರೋಹಣ ಮಹಾಪೂಜೆ ನಡೆಯಿತು.

ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ  ಹಿರಿಯರಾದ  ಶ್ಯಾಮ  ಹೆಗ್ಡೆ, ಸೀತಾ ಶೆಟ್ಟಿ ಕುರೆಲ್ಯಗುತ್ತು , ಅಬ್ಬಾಸ್  ಬ್ಯಾರಿ ಬಳಂಜ  ಇವರುಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಅಶ್ವತ್ ಹೆಗ್ಡೆ ಬಳಂಜ,  ಅನುವಂಶಿಯ ಆಡಳಿತ ಮೊಕ್ತೇಸರ ಬಿ.ಶೀತಲ್ ಪಡಿವಾಳ, ಹಿರಿಯರಾದ  ಹೆಚ್ ಧರ್ಣಪ್ಪ ಪೂಜಾರಿ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ  ಬಾರ್ದಡ್ಕ  ಉಪಸ್ಥಿತರಿದ್ದರು.

ನಂತರ  ಜಿಲ್ಲೆಯ ಹೆಸರಾಂತ ಕಲಾವಿದರಿಂದ ಚೆಂಡೆ ಮತ್ತು ಡೊಳ್ಳು ಜುಗಲ್‌ಬಂದಿ ಹಾಗೂ ಕೀಲುಕುದುರೆ, ವೈವಿಧ್ಯಮಯ ಗೊಂಬೆ ಕುಣಿತ, ವೈಭವೊಪೇತ ಮೆರವಣಿಗೆಯಲ್ಲಿ ಶ್ರೀ ದೈವಗಳ ಭಂಡಾರ ಆಗಮನ ಹಾಗೂ ಸುಡುಮದ್ದು ಪ್ರದರ್ಶನ ನಡೆಯಿತು.  ವಿಠಲ ನಾಯಕ್ ಮತ್ತು ಬಳಗ, ಕಲ್ಲಡ್ಕ ಇವರಿಂದ ಗೀತ ಸಾಹಿತ್ಯ ಸಂಭ್ರಮ ಸಂದೇಶದ ಸಂತೋಷ ವಿನೂತನ ಶೈಲಿಯ ಕಾರ್ಯಕ್ರಮ,  ನವ ವೈಭವ ಕಲಾವಿದರು ಮೂಲ್ಕಿ ಚಂದ್ರಶೇಖರ ಸುವರ್ಣ ಪರಿಕಲ್ಪನೆ, ರಚನೆ ನಿರ್ದೇಶನದ ತುಳುನಾಡ ವೈಭವ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.