72ರ ಉತ್ಸಾಹಿ ಯುವಕ! ಉಮಾಪತಿ ಮೊದಲಿಯಾರ್‌ರಿಂದ ಸೈಕಲ್ ಯಾತ್ರೆಯ ಮೂಲಕ ಮತದಾನ ಜಾಗೃತಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಉಮಾಪತಿ ಮೊದಲಿಯಾರ್ ಅವರು ಸೈಕಲ್ ಮೂಲಕ ಪರ್ಯಟನೆ ನಡೆಸುತ್ತಾ ಮತದಾರರಲ್ಲಿ ಕಡ್ಡಾಯ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಎ.6 ರಂದೇ ಬೆಳ್ತಂಗಡಿ ತಾಲೂಕಿಗೆ ತಲುಪಿರುವ ಅವರು ಎ.9 ಮತ್ತು 10 ರಂದು ಇಲ್ಲಿನ ತಾ.ಪಂ ಸಹಯೋಗದಲ್ಲಿ ಆಯ್ದ ಪಂಚಾಯತ್ ಮತ್ತು ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಹಕಾರದೊಂದಿಗೆ ನಗರದಲ್ಲಿ ಕರಪತ್ರ ಅಭಿಯಾನ ನಡೆಸಿದರು.
ಮಡಂತ್ಯಾರು, ಮಾಲಾಡಿ, ಕುವೆಟ್ಟು, ಲಾಯಿಲ, ಉಜಿರೆ, ಧರ್ಮಸ್ಥಳ, ಕೊಕ್ಕಡ ಪಂಚಾಯತ್‌ಗಳಲ್ಲಿ ಅವರು ಸೈಕಲ್ ಜಾಥಾ, ಸಣ್ಣ ಮಟ್ಟದ ಜಾಗೃತಿ ಸಂದೇಶ ಭಾಷಣ, ಕರಪತ್ರಗಳನ್ನು ಹಂಚಿದರು.
ಚಿಕ್ಕಮಗಳೂರಿನಿಂದ ಆರಂಭಗೊಂಡ ಅವರ ಈ ಅಭಿಯಾನ ಬೆಳ್ತಂಗಡಿಗೆ ತಲುಪಿದೆ. 72 ರ ಇಳಿವಯಸ್ಸಿನಲ್ಲಿರುವ ಮೊದಲಿಯಾರ್ ಅವರು ಸೈಕಲ್ ಮೂಲಕವೇ ಈ ಜಾಗೃತಿ ನಡೆಸುತ್ತಿದ್ದಾರೆ. ಪರಿಸರ ಕಾಳಜಿಯುಳ್ಳ ಅವರು ತಮ್ಮ ಯಾತ್ರೆಯುದ್ದಕ್ಕೂ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕಳೆದ 35 ವರ್ಷಗಳಿಂದ ಅವರು ಇಂತಹದ್ದೇ ಅನೇಕ ಅಭಿಯಾನಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದಾರೆ.
ಯುವ ಜನತೆ ಮತದಾನದಿಂದ ಹೊರಗುಳಿಯ ಬಾರದು:
ಯುವಜನತೆ ಮತ್ತು ವಿದ್ಯಾವಂತರು ಮತದಾನದಿಂದ ಹಿಂದೆ ಉಳಿಯುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸುವ ಅವರು ನನ್ನ ಈ ಯಾತ್ರೆಯುದ್ದಕ್ಕೂ ಅವರನ್ನೇ ಅತೀ ಹೆಚ್ಚು ಕೇಂದ್ರೀಕರಿಸುತ್ತೇನೆ. ಯಾಕೆಂದರೆ ಈ ದೇಶದ ಮುಂದಿನ ದಿಕ್ಕು ತೋರಬೇಕಾದವರು ಯುವಜನತೆ ಮತ್ತು ಶಿಕ್ಷಣವಂತರು ಎನ್ನುತ್ತಾರೆ ಅವರು. ಅಲ್ಲದೆ ತನ್ನ ಯಾತ್ರೆಯುದ್ದಕ್ಕೂ ಸಿಗುವ ಎಲ್ಲಾ ಪೊಲೀಸ್ ಠಾಣೆಗಳಿಗೂ ಅವರು ಭೇಟಿ ನೀಡಿ ಅವರಿಂದ ಕಡ್ಡಾಯ ಮತದಾನ ಮತದಾನದ ಪ್ರತಿಜ್ಞೆ ಪಡೆಯುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ಮೆಕ್ಯಾನಿಕ್ ವೃತ್ತಿ ನಡೆಸುತ್ತಿರುವ ಅವರ ಪತ್ನಿ ಅನಾರೋಗ್ಯದಿಂದಿದ್ದು, ದತ್ತು ತೆಗೆದುಕೊಂಡ ಪುತ್ರಿಯನ್ನು ವಿವಾಹ ಮಾಡಿಕೊಟ್ಟಿದ್ದಾರೆ.
ಬೆಳ್ತಂಗಡಿಗೆ ಬಂದವರಿಗೆ ಇಲ್ಲಿನ ತಾ.ಪಂ ವತಿಯಿಂದ ವಸತಿ ಸೌಲಭ್ಯ ಮಾಡಿಕೊಡುವಂತೆ ಸ್ವೀಪ್ ಸಮಿತಿಯಿಂದ ಆದೇಶವಿದ್ದು, ಧರ್ಮಸ್ಥಳದಲ್ಲಿ ತಂಗಿ ತಾಲೂಕಿನ ಯಾತ್ರೆ ಪೂರ್ಣಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.