ಬಳಂಜ: ಇತಿಹಾಸ ಪ್ರಸಿದ್ಧ ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಷಾವಧಿ ಜಾತ್ರಾಮಹೋತ್ಸವದ 5ನೇ ದಿನದ ಉತ್ಸವದಂದು ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಬಳಂಜ ಶಾಲಾ ವಿದ್ಯಾರ್ಥಿಗಳು ಗೆಜ್ಜೆಕಟ್ಟಿ ಪ್ರೇಕ್ಷಕರ ಗಮನ ಸೆಳೆದರು.
ಅಶ್ವಥ್ ಹೆಗ್ಡೆ ಬಳಂಜ ರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಾತ್ರಾ ಉತ್ಸವಕ್ಕೆ ಯೋಗೀಶ್ ಶರ್ಮರವರ ನಿರ್ದೇಶನದಲ್ಲಿ ಶ್ರೀದೇವಿ ವೈಷ್ಣವಿ ಯಕ್ಷಗಾನ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದದವರು, ಊರವರು, ಮಕ್ಕಳ ಯಕ್ಷಗಾನ ವೀಕ್ಷಿಸಿ, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.