ನಾವರ: ಸರಕಾರಿ ಜಾಗದಿಂದ ಭಾರೀ ಮರಗಳ ಮಾರಣಹೋಮ ಇಬ್ಬರ ವಿರುದ್ಧ ಪ್ರಕರಣ ದಾಖಲು: 91,750ರೂ. ದಂಡ ವಸೂಲಿ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಇಲ್ಲಿನ ಅರಣ್ಯ ಇಲಾಖೆ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಅಳದಂಗಡಿ ಸನಿಹದ ನಾವರ ಬೊನ್ನಿಗೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಭಾರೀ ಪ್ರಮಾಣದ ಮರಗಳನ್ನು ಕಡಿದ ಪ್ರಕರಣವನ್ನು ವೇಣೂರು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ. ಈ ಸಂಬಂಧ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಒಟ್ಟು 91750 ರೂ. ದಂಡ ವಸೂಲಿ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ನಾವರ ಗ್ರಾಮದ ಕೇಶವ ಮತ್ತು ಇನ್ನೊಂದು ಪ್ರಕರಣದಲ್ಲಿ ಇದೇ ಗ್ರಾಮದ ಸಂತೋಷ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಶವ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಕೀರಾಲ್‌ಬೋಗಿ ಜಾತಿಯ 55  ದಿಮ್ಮಿಗಳು, 27 ಮೀಟರ್ ಕಟ್ಟಿಗೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಸಂತೋಷ್ ಅವರ ಪ್ರಕರಣದಲ್ಲಿ 60 ದಿಮ್ಮಿಗಳು ಮತ್ತು 23 ಮೀಟರ್ ಕಟ್ಟಿಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇವರುಗಳು ಸರಕಾರಿ ಜಾಗದಲ್ಲಿ ಈ ಕೃತ್ಯವೆಸಗಿರುವ ಬಗ್ಗೆ ಉಪವಲಯ ಅರಣ್ಯಾಧಿಕಾರಿ ಅಜಿತ್ ಕುಮಾರ್ ಸಹಿತದ ಸಿಬ್ಬಂದಿಗಳು ಪತ್ತೆ ಹಚ್ಚಿ ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಎಸಿಎಫ್ ಅವರು ಕೈಗೊಳ್ಳುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.