ಚಂದ್ಕೂರು ದೇವಸ್ಥಾನ: ನೂತನ ರಸ್ತೆ ಉದ್ಘಾಟನೆ

Advt_NewsUnder_1
Advt_NewsUnder_1
ರಸ್ತೆಗೆ ಜಾಗ ನೀಡಿದ ಆನಂದ ಶೆಟ್ಟಿ ಇವರನ್ನು ಹರ್ಷೇಂದ್ರ ಕುಮಾರ್ ಸನ್ಮಾನಿಸುತ್ತಿರುವುದು

ಲಾಯಿಲ: ಇತಿಹಾಸ ಪ್ರಸಿದ್ಧ ಲಾಯಿಲ ಗ್ರಾಮದ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮೇ 8ರಿಂದ 13ರವರಗೆ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಎ.9 ರಂದು ಕ್ಷೇತ್ರಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಮಾರು 1.25 ಕೋಟಿ ವೆಚ್ಚದಲ್ಲಿ ದೇವಸ್ಥಾನ ಶಿಲಾಮಯವಾಗಿ ಜೀಣೋದ್ಧಾರಗೊಳ್ಳುತ್ತಿದ್ದು, ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಇದೇ ಸಂದರ್ಭದಲ್ಲಿ ಅವರು ದೇವಸ್ಥಾನಕ್ಕೆ ಬರಲು ನೂತನವಾಗಿ ನಿರ್ಮಿಸಲಾದ ರಸ್ತೆಯನ್ನು ಉದ್ಘಾಟಿಸಿ, ಸಂಚಾರಕ್ಕೆ ಅನುವು ಮಾಡಿದರು. ರಸ್ತೆಗಾಗಿ ತಮ್ಮ ಜಾಗವನ್ನು ಬಿಟ್ಟುಕೊಟ್ಟ ಆನಂದ ಶೆಟ್ಟಿ ದೋರ್ಜಾಲು ಅವರನ್ನು ಹರ್ಷೇಂದ್ರ ಕುಮಾರ್ ಸನ್ಮಾನಿಸಿದರು.
ಪ್ರಧಾನ ಅರ್ಚಕ ಗಣೇಶ್ ಐತಾಳ್ ಪರ್ಪುಂಜ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಎನ್. ಧನಂಜಯ ಅಜ್ರಿ, ಜೀಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ ಧನಂಜಯ ರಾವ್, ಉಪಾಧ್ಯಕ್ಷ ಮುನಿರಾಜ ಅಜ್ರಿ, ವಿಠಲ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಕಾರ್ಯದರ್ಶಿಗಳಾದ ವಸಂತ ಸುವರ್ಣ, ದಯಾನಂದ ಸಾಲ್ಯಾನ್, ಖಜಾಂಚಿಗಳಾದ ಯೋಗೀಶ ಆರ್. ಭಿಡೆ, ಗಿರೀಶ್ ಡೋಂಗ್ರೆ, ರಾಜೇಶ್ ಶೆಟ್ಟಿ ಲಾಯಿಲ, ಸುಬ್ರಾಯ ಡೋಂಗ್ರೆ, ಚಿತ್ತರಂಜನ್ ಹೆಗ್ಡೆ, ಪ್ರಸಾದ್ ಶೆಟ್ಟಿ ಏಣಿಂಜೆ, ಜಯಾನಂದ ಲಾಯಿಲ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.