ಮುಂಡಾಜೆ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಭೂಮಿ ಪೂಜೆ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ:   ಸೋಮಂತಡ್ಕ ಪೇಟೆಯಲ್ಲಿ ನಿರ್ಮಾಣವಾಗಲಿರುವ ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಎ.8 ರಂದು ಅಡೂರು ಇಲೆಕ್ಟ್ರಿಕಲ್ಸ್ ಕಟ್ಟಡದ ಪಕ್ಕದಲ್ಲಿ ಸಂಘ ಖರೀದಿಸಿದ ಜಾಗದಲ್ಲಿ ಭೂಮಿಪೂಜೆಯಾಗಿ ಪ್ರಥಮ ಗುದ್ದಲಿಯನ್ನು ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅಡೂರು ವೆಂಕಟ್ರಾವ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎನ್.ಎಸ್.ಗೊಖಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡಕೆ, ಮಾಜಿ ಅಧ್ಯಕ್ಷರುಗಳಾದ ಪರಾರಿ ವೆಂಕಟ್ರಮಣ ಹೆಬ್ಬಾರ್, ಶಶಿಧರ ಖಾಡಿಲ್ಕಾರ್, ಹಾಲಿ ಹಾಗೂ ಮಾಜಿ ನಿರ್ದೇಶಕರುಗಳು, ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಸಂಘದ ಗ್ರಾಹಕರು, ಊರ ಗಣ್ಯರು, ಸಂಘದ ಎಲ್ಲಾ ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಭೂಮಿ ಪೂಜೆಯ ವೈದಿಕ ನೇತೃತ್ವವನ್ನು ಸುರೇಶ್ ಗೊಖಲೆ ಮತ್ತು ಕಾನರ್ಪ ಸತ್ಯನಾರಾಯಣ ಹೊಳ್ಳ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.