HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಎ.14 ರಿಂದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ

ವೇಣೂರು : ಶ್ರೀ ಕ್ಷೇತ್ರ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವರ್ಷಾವಧಿ ಜಾತ್ರಾ ಮಹೋತ್ಸವವು ಎ.14 ರಿಂದ ಎ.23 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಎ.14 ರಂದು ಬೆಳಿಗ್ಗೆ ತೋರಣ ಮುಹೂರ್ತ ರುದ್ರಾಭಿಷೇಕ ಬಳಿಕ ಧ್ವಜಾರೋಹಣ ಎ.16 ರಂದು ಗಣಪತಿ ದೇವರ ಸನ್ನಿಧಿಯಲ್ಲಿ 12 ತೆಂಗಿನಕಾಯಿ ಗಣಹೋಮ, ಎ.17 ರಂದು ಶ್ರೀ ಜನಾರ್ದನ ದೇವರ ಸನ್ನಿಧಿಯಲ್ಲಿ ವಿಷ್ಣು ಸಹಸ್ರ ನಾಮಾರ್ಚನೆ, ಎ.18 ರಂದು ಶ್ರೀ ನಾಗದೇವರ ಸನ್ನಿಧಿಯಲ್ಲಿ ಪವಮಾನ, ಕಲಶಾಭಿಷೇಕ, ಆಶ್ಲೇಷ ಬಲಿ, ಎ.19 ರಂದು ಭದ್ರಕಾಳಿ ದೇವಿ ಸನ್ನಿಧಿಯಲ್ಲಿ ಚಂಡಿಕಾಯಾಗ, ಎ.20 ರಂದು ಸಾರ್ವಜನಿಕ ಶನಿಪೂಜೆ ರಾತ್ರಿ ವಸಂತ ಕಟ್ಟೆ ಪೂಜೆ,ದರ್ಶನ ಬಲಿ ಬಳಿಕ ಕಲ್ಕುಡ – ಕಲ್ಲುರ್ಟಿ ದೈವಗಳ ನೇಮ ಎ.21 ರಂದು ಶ್ರೀ ಭೂತ ಬಲಿ ಕವಾಟ ಬಂಧನ ಎ.22 ರಂದು ಕವಾಟೋದ್ಘಾಟನೆ ರಾತ್ರಿ ಮಹಾ ರಥೋತ್ಸವ ಬಳಿಕ ಅವಭೃತ ಕಟ್ಟೆ ಪೂಜೆ ಬಾಕಿಮಾರು ಗದ್ದೆಗೆ ಸವಾರಿ, ದೈವ ದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಹಣ ಎ.23 ರಂದು ಸಂಪ್ರೋಕ್ಷಣೆ ರಾತ್ರಿ ಅಂಗಣ ಪಂಜುರ್ಲಿ ದೈವದ ನೇಮ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜಯರಾಮ ಶೆಟ್ಟಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.