ಮಾನಸಿಕ ಅಸ್ವಸ್ಥೆ ಲಕ್ಷ್ಮಮ್ಮ ಹುಟ್ಟೂರು ಪಿರಿಯಾಪಟ್ಟಣಕ್ಕೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ನಾರಾವಿ ಗ್ರಾ.ಪಂ ವ್ಯಾಪ್ತಿಯ ಕುತ್ಲೂರು ಕುಕ್ಕುಜೆ ಪರಿಸರದಲ್ಲಿ ಎ.9 ರಂದು ಬೆಳಿಗ್ಗೆ ಮಾನಸಿಕ ಅಸ್ವಸ್ಥರಾಗಿ ತಿರುಗಾಡುತ್ತಿದ್ದ ವೃದ್ದೆಯನ್ನು ನಾರಾವಿ ಪಂಚಾಯತ್ ಉಪಾಧ್ಯಕ್ಷೆ ಯಶೋಧರವರು ನೋಡಿ ವಿಚಾರಿಸಿದಾಗ ತಮ್ಮ ಹೆಸರು ಲಕ್ಷಮ್ಮ, ಸ್ವಂತ ಊರು ಕಣಗಲ್ ಎಂದು ತಿಳಿಸಿದರು. ಈ ಬಗ್ಗೆ ಚುನಾವಣಾ ಚೆಕ್ ಪೋಸ್ಟ್ ಕಾರ್ಯದಲ್ಲಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ. ಎಸ್.ಎಂ. ಅವರಿಗೆ ಕರೆ ಮಾಡಿ ತಿಳಿಸಿದಾಗ ಅವರು ಕೂಡಲೇ ಸ್ಪಂದಿಸಿ ಕ್ರಮವಹಿಸಿದರು.
ನಾರಾವಿ ಪಂಚಾಯತ್ ಸಿಬ್ಬಂದಿ ಸಂತೋಷ್ ಮತ್ತು ವೇಣೂರು ಠಾಣೆಯ ಪೊಲೀಸ್ ರಾಜೇಶ್ ಅವರು ವೃದ್ಧೆಯ ಸ್ವಂತ ಸ್ಥಳದ ಬಗ್ಗೆ ಪಿರಿಯಾಪಟ್ಟಣ ತಾಲೂಕು ಕಣಗಲ್ ಪಂಚಾಯತ್ ಸಿಬ್ಬಂದಿ ಪ್ರಕಾಶ್ ಮತ್ತು ಅಲ್ಲಿನ ಅಧ್ಯಕ್ಷರನ್ನು ಸಂಪರ್ಕಿಸಿ ನಿಖರ ಮಾಹಿತಿ ಪಡೆದರು. ನಂತರ ವೃದ್ಧೆ ಲಕ್ಷ್ಮಮ್ಮರನ್ನು ನಾರಾವಿಯ ವಾಟ್ಸಾಪ್ ಮೊಬೈಲ್ ಕೇರ್‌ನ ಮಾಲಕ ಶ್ರೀರಾಜ್ ಪವಿ, ಸುಧಾಕರ್, ಲಕ್ಷ್ಮಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಸಹಕಾರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಿ ವೇಣೂರು ಪೊಲೀಸ್ ಮತ್ತು ನಾರಾವಿ ಪಿಡಿಒ ಅವರ ಸಮ್ಮುಖದಲ್ಲಿ ಲಕ್ಷ್ಮಮ್ಮರ ಸಂಬಂಧಿಕರೊಂದಿಗೆ ಸ್ವಂತ ಊರಿಗೆ ಕಳುಹಿಸಿಕೊಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.