ಮದ್ದಡ್ಕತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

ಮದ್ದಡ್ಕ: ಇಲ್ಲಿಯ ಮದ್ದಡ್ಕತಾಯಿ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಚಾಂದ್ರಮಾನ ಯುಗಾದಿ ಎ.6 ರಂದು ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವವು ವಿಜೃಂಭಣೆಯಿಂದ ಜರಗಿತು.
ಅಂದು ಸಂಜೆ 6.30 ಕ್ಕೆ ರಘರಾಮ್ ಭಟ್ ಮಠ ಅವರ ಮನೆಯಿಂದ ಸುಡು ಮದ್ದು ಪ್ರದರ್ಶನದೊಂದಿಗೆ ವೈಭವದ ಭಂಡಾರ ಬಂದು, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ನಂತರ ದೈವದ ನೇಮೋತ್ಸವ ಜರಗಿತು.
ಶಾಸಕ ಹರೀಶ್ ಪೂಂಜ, ಮಾಜಿ ಶಾಸಕರಾದ ವಸಂತ ಬಂಗೇರ, ಪ್ರಭಾಕರ ಬಂಗೇರ, ಕುವೆಟ್ಟು ಕ್ಷೇತ್ರದ ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿ, ಅರ್ಚಕರಾದ ರಘುರಾಮ ಭಟ್ ಮಠ, ಶ್ರೀನಿವಾಸ ಅಮ್ಮುಣ್ಣಾಯ ಮೂಡುಮನೆ, ಯುಗಾದಿ ಆಚರಣಾ ಸಮಿತಿ ಸ್ಥಾಪಕಾಧ್ಯಕ್ಷ ಎಂ.ಮೋಹನ ಕೆರ್ಮುಣ್ಣಾಯ ಮೈರಾರು, ಯುಗಾದಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಇರ್ವತ್ರಾಯ ತಂಗೋಯಿ, ವೃಷಭ ಆರಿಗ ಪರಾರಿಗುತ್ತು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಚಾಂದ್ರಮಾನ ಯುಗಾದಿ ಆಚರಣಾ ಸಮಿತಿ ಮದ್ದಡ್ಕ ವಿಷ್ಣು ಕಲಾವಿದರು ಮದ್ದಡ್ಕ ಅಭಿನಯದ ಅನಂತ್ ಎಸ್. ಇರ್ವತ್ರಾಯ ತಂಗೋಯಿ ರಚಿಸಿದ ಬರೆತಿನಾರ್ ಬರುವೆರಾ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.