ಮಚ್ಚಿನ: ವಿದ್ಯಾಸಾಗರ ವಸತಿ ಶಾಲೆಯಲ್ಲಿ ಬೇಸಿಗೆ ಶಿಬಿರ

Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಇಲ್ಲಿಯ ಬಳ್ಳಮಂಜ ವಿದ್ಯಾಸಾಗರ ವಸತಿ ಶಾಲೆಯಲ್ಲಿ 10 ದಿನಗಳ ಬೇಸಿಗೆ ಶಿಬಿರವನ್ನು ಎ.1 ರಂದು ಶಾಲಾ ಪೋಷಕರ ಸಮಿತಿ ಅಧ್ಯಕ್ಷ ರಾಘವ ಪೂಜಾರಿ ಉದ್ಘಾಟಿಸಿ, ವಿದ್ಯಾರ್ಥಿಗಳು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶಾಲಾ ಸಂಚಾಲಕ ವೆಂಕಟ ರೆಡ್ಡಿ, ಶಾಲಾ ಮುಖ್ಯಸ್ಥೆ ಶಬಿತಾ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ ಸುಧೀಂದ್ರ ಬಿ.ನಿಡ್ಲೆ ಭಾಗವಹಿಸಿದ್ದರು. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ನೃತ್ಯ, ಹಾಡು, ಪೇಪರ್ ಕ್ರಾಫ್ಟ್, ಕಥೆ, ರಸಪ್ರಶ್ನೆ, ಯೋಗ ಇತ್ಯಾದಿಗಳ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.