ಶ್ರೀ ಕೃಷ್ಣ ನಗರ ಭಜನಾ ತಂಡ ತೋಟತ್ತಾಡಿ, ಯುಗಾದಿ ಸಂಭ್ರಮಾಚರಣೆ, ಕಮ್ಮಟ ಭಜನೆ

ಕಣಿ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಮತ್ತು ಶ್ರೀಧರ್ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ತೋಟತ್ತಾಡಿ: ಇಲ್ಲಿಯ ಕೃಷ್ಣನಗರ ಭಜನಾ ತಂಡ ತೋಟತ್ತಾಡಿ ಹಾಗೂ ಊರವರ ಸಹಯೋಗದೊಂದಿಗೆ 5ನೇ ವರ್ಷದ ವಾರ್ಷಿಕ ಕಮ್ಮಟ ಭಜನಾ ಕಾರ್ಯಕ್ರಮವು ಹಾಗೂ ಯುಗಾದಿ ಸಂಭ್ರಮಾಚರಣೆ ಎ.6ರಂದು ತೋಟತ್ತಾಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಠಾರದಲ್ಲಿ ನಡೆಯಿತು.
ಯುಗದ ಆದಿ ಎಂದು ಕರೆಯುವ ಯುಗಾದಿಯನ್ನು ನಾವು ಬಹಳ ಸಂಭ್ರಮದಿಂದ ಹಿಂದುಗಳು ಆಚರಿಸಿಕೊಂಡು ಬರುತ್ತಿದ್ದೇವೆ. ಯುಗಾದಿಯಲ್ಲಿ ಬೇವು ಮತ್ತು ಬೆಲ್ಲ ಸವಿಯುತ್ತೇವೆ ಇದರ ಉದ್ದೇಶವು ಜೀವನದಲ್ಲಿ ಬರುವ ಕಷ್ಟ, ಸುಖ ಇವುಗಳನ್ನು ಸಮಾನವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದರ ಅರ್ಥವಾಗಿದೆ. ಇದು ಯುಗಾದಿ ಹೊಸ ವರ್ಷದ ಪ್ರಾರಂಭದಲ್ಲಿ ಆಚರಿಸುತ್ತೇವೆ ಹೊಸ ವರ್ಷವು ಎಲ್ಲರಿಗೂ ಸುಖ, ಶಾಂತಿ ನೆಮ್ಮದಿ ನೀಡಲಿ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀಧರ ಭಟ್ ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಾ ತಿಳಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣನಗರ ಭಜನಾ ಮಂಡಳಿ ಅಧ್ಯಕ್ಷ ಜಯಚಂದ್ರ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕ ಶಿವದಾಸನ್ ಪಾಲೆತ್ತಾಡಿ, ತೋಟತ್ತಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಜಯಂತಿ ಕೆ.ಗೌಡ ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರ ಪಿ.ಹೆಚ್ ಈಶ್ವರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೋ ಪೂಜೆ, ಆಯ್ದ ಭಜನಾ ತಂಡದಿಂದ ಕಮ್ಮಟ ಭಜನೆ, ಪದ್ಯಭಾಗವನ್ನು ಮುಂಡಾಜೆ ಕೀರ್ತನಾ ಭಜನಾ ಮಂಡಳಿಯವರು ನಡೆಸಿಕೊಟ್ಟರು. ಉಜಿರೆ ಎಸ್.ಡಿ.ಎಂ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜನರನ್ನು ರಂಜಿಸಿದರು. ಭಜನಾ ತಂಡದ ಸದಸ್ಯ ಸುಧೀರ್ ಗೌಡ ಸ್ವಾಗತಿಸಿ ಧನ್ಯವಾದವಿತ್ತರು ಅವಿನಾಶ್ ಗೌಡ ಪ್ರಾಸ್ತಾವಿಸಿದರು.ಗ್ರಾ.ಪಂ ಸದಸ್ಯ ಓಬಯ್ಯ ಗೌಡ ನಿರೂಪಿಸಿದರು. ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ರಾಕ್ಷಸ ದಹನ ನಂತರ ಸುಡು ಮದ್ದು ಪ್ರದರ್ಶನ ನಡೆಯಿತು.
ಯುಗಾದಿ ಕಣಿ ಉದ್ಘಾಟನೆ
ಪ್ರಾಂಶುಪಾಲ ಯದುಪತಿ ಗೌಡ ಮಾತಾಡಿ ಇಲ್ಲಿಯ ಯುಗಾದಿ ಕಾರ್ಯಕ್ರಮದಲ್ಲಿಹಳೆ ಸಂಪ್ರದಾಯದ ನೆನಪು ತರುವ ಯುಗಾದಿ ಕಣಿ ವ್ಯವಸ್ಥೆ ಮಾಡಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ತುಳುನಾಡ ಸಾಂಪ್ರಾದಾಯಿಕ ಯುಗಾದಿ ಕಣಿ ಇಡುವ ಪದ್ದತಿಯು ಯುಗಾದಿಯ ಹೊಸವರ್ಷದಲ್ಲಿ ನಾವು ಬೆಳೆದಿರುವ ದವಸ ಧಾನ್ಯ ತರಕಾರಿಗಳನ್ನು ಇಟ್ಟು ಪೂಜೆ ಮಾಡುವ ಉದ್ದೇಶವಾಗಿದೆ. ಕಣಿ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಮತ್ತು ಶ್ರೀಧರ್ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.