ಮುಂಡಾಜೆ : ಶೈಕ್ಷಣಿಕ ಕಾರ್ಯಾಗಾರ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಡಬ ವರ್ತುಲದ ಶಿಕ್ಷಕರಿಗಾಗಿರುವ ಮೂರನೇ ಶೈಕ್ಷಣಿಕ ಕಾರ್ಯಾಗಾರ ಏ.5 ರಂದು ಮುಂಡಾಜೆ ಪ್ರೌಢ ಶಾಲಾ ಸಭಾಭವನದಲ್ಲಿ ಜರುಗಿತು.

ಮುಂಡಾಜೆ ಪ್ರೌಢ ಶಾಲೆ ಮುಂಡಾಜೆ ಮತ್ತು ಸರಸ್ವತಿ ಆಂ.ಮಾಧ್ಯಮ ಶಾಲೆ ಮುಂಡಾಜೆ ಇವುಗಳ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಾಜೆ ಸ್ಥಾನೀಯ ಸಮಿತಿ ಅಧ್ಯಕ್ಷ ಶ್ರೀನಿವಾಸ ರಾವ್ ಕಲ್ಮಂಜ ವಹಿಸಿದ್ದು, ಸಂಸ್ಕಾರ ಮತ್ತು ಮೌಲ್ಯ ವರ್ಧನೆಯ ಜೊತೆಗೆ ಶಿಕ್ಷಣ ನೀಡುವುದೇ ಸಂಸ್ಥೆಯ ಆಶಯ ಎಂದರು.

ಕಾರ್ಯಗಾರಕ್ಕೆ ದೀಪ ಪ್ರಜ್ವಲನ ಮುಖೇನ ಚಾಲನೆ ನೀಡಿದ, ಉಜಿರೆ ಶ್ರೀ ಜನಾರ್ಧನ ಸ್ವಾಮಿ ಕೋಪರೇಟಿವ್ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್, ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯತೆಗಳತ್ತ ಪೂರಕ ಚಿಂತನೆ ನಡೆಸಬೇಕು. ರಾಪ್ಟ್ರ-ಸಂಸ್ಕಾರ-ಧರ್ಮ ಈ ಮೂರೂ ಆಯಾಮದಡಿ ವಿದ್ಯಾರ್ಥಿ ಭವಿಷ್ಯ ಕಟ್ಟಬಲ್ಲ ವಿದ್ಯಾವರ್ಧಕಕ್ಕೆ ಸದಾ ಬೆಂಬಲವಾಗಿರುವ ಆಶಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮೊರಾರ್ಜೆ ದೇಸಾಯಿ ವಸತಿ ಶಾಲೆ ಮುಂಡಾಜೆ ಇದರ ಪ್ರಾಂಶುಪಾಲ ಮುರಳೀಧರ, ಸಾಹಿತಿ ಅಂಕಣಕಾರ ಅರವಿಂದ ಚೊಕ್ಕಾಡಿ, ಆಡಳಿತ ಮಂಡಳಿಯ ಭಾರತೀ ಫಡ್ಕೆ, ಶಶಿಧರ ಕಲ್ಮಂಜ, ವಿಶ್ವನಾಥ ಶೆಟ್ಟಿ, ಅಶೋಕ್ ಕುಮಾರ್,ಅನಂತ್ ಭಟ್ ಮಚ್ಚಿಮಲೆ, ಪಿ.ಯು ಕಾಲೇಜಿನ ಉಪ ಪ್ರಾಚಾರ್ಯ ಪುರುಷೋತ್ತಮ ಶೆಟ್ಟಿ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಮಾತಾಜಿ ಚಂದ್ರಮತಿ ಹಾಗೂ ವಿವಿಧ ಶಾಲಾ ಮುಖ್ಯ ಶಿಕ್ಷಕರುಗಳು ಉಪಸ್ಥಿತರಿದ್ದರು.

ಪ್ರಸ್ತಾವನೆಗೈದ ಶೈಕ್ಷಣಿಕ ಪರಿವೀಕ್ಷಕ ರಘರಾಜ್ ಉಬರಡ್ಕ, ತರಗತಿ ಕೋಣೆಗೆ ತೆರಳುವ ಶಿಕ್ಷಕರನ್ನು ಅಪ್ ಗ್ರೇಡ್ ಮಾಡುವ ಸದುದ್ದೇಶ ಸಂಸ್ಥೆಯದ್ದು. ಮೃದುತ್ವ ಮತ್ತು ಕಾಠಿಣ್ಯತೆಗೆ ಸಮಯೋಚಿತವಾಗಿ ತರಗತಿ ಕೋಣೆಗಳಲ್ಲಿ ಶಿಕ್ಷಕರು ತಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು.ಈ ದಿಶೆಯಲ್ಲಿ ವಿದ್ಯಾರ್ಥಿ ಭಾವನೆಗಳನ್ನು ತಟ್ಟುವ ಮತ್ತು ಮುಟ್ಟುವ ಯೋಚನೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಾರಿಯಾಗಲಿದೆ ಎಂದರು.

ವರ್ತುಲದ ಸಂಪನ್ಮೂಲ ಪ್ರಮುಖ್ ಚಂದ್ರಹಾಸ ಕೆ.ಸಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕ ಸುರೇಶ್ ಎಂ.ಟಿ ನಿರೂಪಿಸಿ, ಕನ್ನಡ ಮಾಧ್ಯಮ ವಿಭಾಗದ ಮುಖ್ಯ ಮಾತಾಜಿ ಜಯಂತಿ ಟಿ ಧನ್ಯವಾದವಿತ್ತರು. ಸಂಪನ್ಮೂಲ ವ್ಯಕ್ತಿಗಳನ್ನು ಚಂದ್ರಶೇಖರ್ ಮತ್ತು ಗುಣಪಾಲ್ ಎಂ.ಎಸ್ ಪರಿಚಯಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.