ಲಾಯಿಲ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ-ಸಾಧಕರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಲಾಯಿಲ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಎ.6 ರಂದು ಇಲ್ಲಿಯ ಶ್ರೀ ಸಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ಜರುಗಿತು.
ಬೆಳಗ್ಗೆ9ರಿಂದ ಚಂದ್ಕೂರು ಸದಾಶಿವ ಹೊಳ್ಳರ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದು ಮಹಾಪೂಜೆ ಜರುಗಿತು. ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್, ತುಳುನಾಡಿನಲ್ಲಿ ದೈವ-ದೇವರ ಆರಾಧನೆಗೆ ವಿಶೇಷ ಮಹತ್ವವಿದೆ. ಹಿಂದೆ ನಮ್ಮ ಸಂಪ್ರಾದಾಯ, ಕಟ್ಟುಪಾಡುಗಳಂತೆ ಆಚರಣೆಗಳು ನಡೆಯುತ್ತಿದ್ದರವು ಆದರೆ ಈಗ ನಾಮಕಾವಸ್ಥೆಗೆ ಇಂತಹ ಕಾರ್ಯಗಳು ನಡೆಯುತ್ತಿದೆ. ನಮ್ಮ ಸಂಸ್ಕೃತಿ ಉಳಿಯಬೇಕು. ಪರಿಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ಲಾಯಿಲ ವಹಿಸಿ, ಈ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್, ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ಮೇಲ್ವಿಚಾರಕ ಸೋಮಪ್ಪ ಪೂಜಾರಿ ಭಾಗವಹಿಸಿ ಶುಭ ಕೋರಿದರು. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯಕ್ಷ ವಸಂತ ಸುವರ್ಣ, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ ಉಪಸ್ಥಿತರಿದ್ದರು.
ಪೂಜಾ ಸಮಿತಿ ಕಾರ್ಯದರ್ಶಿ ಮಧುಸೂದನ್ ಸ್ವಾಗತಿಸಿದರು. ಗೌರವ ಸಲಹೆಗಾರ ಸತೀಶ್ ಓಡದಕರಿಯ ವಂದಿಸಿದರು. ಗೌರವ ಸಲಹೆಗಾರ ರುಕ್ಮಯ ಕನ್ನಾಜೆ ಹಾಗೂ ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು. ಯೋಜನೆಯ ಮೇಲ್ವಿಚಾರಕ ರಾಜೇಶ್ ಪಿ, ಸಮಿತಿ ಕೋಶಾಧಿಕಾರಿ ಪುರಂದರ ಪೂಜಾರಿ, ಜೊತೆ ಕಾರ್ಯದರ್ಶಿ ಗಣೇಶ್ ಕನ್ನಾಜೆ, ಉಪಾಧ್ಯಕ್ಷ ಬಿ. ಕೃಷ್ಣ ಒಡದಕರಿಯ, ಪ್ರಗತಿ ಬಂಧು ಸುರೇಶ್, ಸೇವಾ ಪ್ರತಿನಿಧಿಗಳಾದ ಪುಷ್ಪಾ ಶೆಣೈ, ಗೀತಾ ಎಸ್, ಜ್ಯೋತಿ ಮೊದಲಾದವರು ಸಹಕರಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಭೂ ಸೇನೆಯ ಮಾಜಿ ಸೈನಿಕ ನಿಕೋಲಾಸ್ ಪ್ಲಾಸಿಟ್ ಪಿಂಟೋ, ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಾಕೂಬ್ ಕೊಯ್ಯೂರು, ಜಿಲ್ಲಾ ಮಟ್ಟದ ಜೀವರಕ್ಷಕ ಪ್ರಶಸ್ತಿ ಪುರಸ್ಕೃತ ಹಮೀದ್ ಲಾಯಿಲ, ದೂರದರ್ಶನ ಸ್ಯಾಕ್ಸೊಫೋನ್ ಕಲಾವಿದೆಯರಾದ ಶ್ರೀಮತಿ ಶ್ರೀಜಾ, ಕು| ತುಳಸಿ, ಕು| ಜ್ಯೋತಿ, ಉರಗ ರಕ್ಷಕ ಅಶೋಕ್ ಪಡ್ಲಾಡಿ, ಪೌರಕಾರ್ಮಿಕ ಕುಮಾರ್( ಲಾಯಿಲ ಗ್ರಾ.ಪಂ), ಕೃಷಿ ಕ್ಷೇತ್ರದ ಸಾಧಕ ಜಾನ್ ರೊಡ್ರಿಗಸ್ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸೇವಾ ಪ್ರತಿನಿಧಿಗಳಾದ ಶ್ರೀಮತಿ ಪುಷ್ಪಾ ಶೆಣೈ, ಶ್ರೀಮತಿ ಗೀತಾ, ಶ್ರೀಮತಿ ಜ್ಯೋತಿ ಇವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಯ್ಯೂರು ಗ್ರಾಮದ ಹೈದರಾಲಿ ಹಳ್ಳಿಮನೆ ಇವರಿಂದ ತುಳುನಾಡಿನ ಪ್ರಾಚೀನ ವಸ್ತುಗಳ ಪ್ರದರ್ಶನ ವಿಶೇಷ ಆಕರ್ಷಣೆಯನ್ನು ಗಳಿಸಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ಇವರಿಂದ ` ಗೀತಾ ಸಾಹಿತ್ಯ ಸಂಭ್ರಮ’ ಮನರಂಜಿಸಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.