ಎ.13: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಪದಗ್ರಹಣ ಸಮಾರಂಭ

ಬೆಳ್ತಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್‌2019-20ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಎ.13 ರಂದು ನಡೆಯಲಿದೆ. ಅದೇ ದಿನ ಭಾರತೀಯ ಸೀನಿಯರ್ ಛೇಂಬರಿನ ರಾಷ್ಟ್ರೀಯ ಅಧ್ಯಕ್ಷ ಸೀನಿಯರ್ ಎಸ್.ಅಜಿತ್ ಮೆನನ್ ಉಪಸ್ಥಿತರಿದ್ದು, ಘಟಕದ ಸದಸ್ಯರೊಂದಿಗೆ ಅಧಿಕೃತ ಭೇಟಿ ನಡೆಸಲಿದ್ದಾರೆ ಎಂದು ಸೀನಿಯರ್ ಛೇಂಬರ್‌ನ ನಿಕಟಪೂರ್ವಾಧ್ಯಕ್ಷ ಪ್ರಮೋದ್ ಆರ್ ನಾಯಕ್ ತಿಳಿಸಿದರು.
ಅವರು ಎ.9 ರಂದು ಬೆಳ್ತಂಗಡಿ ಪತ್ರಿಕಾಭನವದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಬೆಳ್ತಂಗಡಿಯ ಶ್ರೀ.ಧ.ಮಂ.ಕಲಾಭವನದ ‘ಪಿನಾಕಿ’ ಸಭಾಭವನದಲ್ಲಿ ಜರುಗಲಿರುವ ಈ ಸಮಾರಂಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ವಂ.ಡಾ| ಲಾರೆನ್ಸ್ ಮುಕ್ಕುಝಿ ಆಶೀರ್ವಚನ ನೀಡಲಿದ್ದಾರೆ. ಉಜಿರೆ ಶ್ರೀ ಧ.ಮಂ ಕಾಲೇಜು ಪ್ರಾಂಶುಪಾಲ ಪ್ರೊ| ಕೇಶವ ಟಿ.ಎನ್, ಭಾರತೀಯ ಸೀನಿಯರ್ ಛೇಂಬರ್‌ನ ಪ್ರ.ಕಾರ್ಯದರ್ಶಿ ಸೀನಿಯರ್ ಬಾಬುರಾಜ್ ಕೆ, ರಾಷ್ಟ್ರೀಯ ಆಡಳಿತ ಮಂಡಳಿಯ ನಿರ್ದೇಶಕರಾದ ಸೀನಿಯರ್ ಡಾ| ಅರವಿಂದ ರಾವ್ ಕೇದಗೆ, ಸೀನಿಯರ್ ಎಂ.ಆರ್.ಜಯೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೀನಿಯರ್ ಛೇಂಬರ್‌ನ ಚುನಾಯಿತ ಅಧ್ಯಕ್ಷ ಪಿ.ಪಿ ಜೋಯ್, ಚುನಾಯಿತ ಉಪಾಧ್ಯಕ್ಷ ಮಂಜುನಾಥ ರೈ, ಖಜಾಂಚಿ ಯಶವಂತ ಪಟವರ್ಧನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.