ಕಾಶಿಪಟ್ಣ: ಕಾಲುಜಾರಿ ಬಿದ್ದು ಯುವತಿ ಸಾವು

ಕಾಶಿಪಟ್ಣ: ಕಾಶಿಪಟ್ಣ ನಿವಾಸಿ ಪ್ರವೀಣ ಗಿಲ್ಬರ್ಟ್ ಪಿಂಟೊರವರ ಸಹೋದರನಾದ ರಿಚರ್ಡ್ ಪಿಂಟೊರವರ ಪುತ್ರಿ ರಿಶೆಲ್ ಪಿಂಟೊ(24.ವ) ರವರು ಎ.೮ ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಬೆಂಗಳೂರಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದರು. ಅಲ್ಲಿ ಇತ್ತೀಚೆಗೆ ಇವರು ಕಾಲುಜಾರಿ ಬಿದ್ದು ತಲೆಯ ಹಿಂಬಾಗಕ್ಕೆ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೋಮಾ ಸ್ಥಿತಿಯಲ್ಲಿದ್ದ ಇವರಿಗೆ ಎರಡು ವಾರಗಳ ಕಾಲ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಿ, ನಂತರ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ೬ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಎ.8 ರಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಇವರ ಚಿಕಿತ್ಸೆಗೆ ಸುಮಾರು 28 ಲಕ್ಷ ರೂ ಖರ್ಚಾಗಿದ್ದು, ಇವರ ತಂದೆ ರಿಚರ್ಡ್ ಪಿಂಟೊ ರವರು ತಮ್ಮ ಆಸ್ತಿ ಮಾರಾಟ ಮಾಡಿ ಹಾಗೂ ದಾನಿಗಳ ನೆರವಿನಿಂದ ಚಿಕಿತ್ಸಾ ವೆಚ್ಚ ಭರಿಸಿದ್ದರು.
ಮೃತರು ತಂದೆ ರಿಚರ್ಡ್ ಪಿಂಟೊ, ತಾಯಿ ಮೇರಿ ಪಿಂಟೊ, ಸಹೋದರ ಮೇವಿನ್ ಪಿಂಟೊ, ಸಹೋದರಿಯರಾದ ರೆನಿಟಾ ಪಿಂಟೊ, ರೀಮಲ್ ಪಿಂಟೊ, ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.