ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ರಂಗ ಪೂಜೆ

ನ್ಯಾಯತರ್ಪು: ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ.5 ರಂದು ರಾತ್ರಿ ವಿಶೇಷ ರಂಗ ಪೂಜೆ, ಭಜನೆ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು ಮತ್ತು ಮನೆಯವರ ಸಹ ಭಾಗಿತ್ವದಲ್ಲಿ ವಿಶೇಷ ರಂಗ ಪೂಜೆ ಸೇವೆ, ಚೆಂಡೆ, ಓಲಗ,ಸುಡು ಮದ್ದುಗಳೊಂದಿಗೆ ವಿಜೃಂಭನೆಯಿಂದ ಜರಗಿತು.
ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಭಜನಾ ಮಂಡಳಿ ಸದಸ್ಯರು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.