ಎ.29: ಬಳ್ಳಮಂಜ ಮೂಡುಗೋಪುರ ಸಮರ್ಪಣೆ

ಬಳ್ಳಮಂಜ: ಇಲ್ಲಿಯ ಪುರಾಣ ಪ್ರಸಿದ್ಧವಾದ ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ತುಳುನಾಡಿನ ಪ್ರಖ್ಯಾತ ನಾಗಕ್ಷೇತ್ರಗಳಲ್ಲಿ ಒಂದಾಗಿರುತ್ತದೆ. ಶ್ರಮನಾಗಸ್ವರೂಪಿ ಶ್ರೀ ಅನಂತೇಶ್ವರ ಸ್ವಾಮಿಯ ದರ್ಶನಾದಿಗಳಾಗಿ ವರ್ಷದಿಂದ ವರ್ಷಕ್ಕೆ ಅಪರಿಮಿತ ಭಕ್ತಾದಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಶ್ರೀ ದೇವಳದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯಿಂದ ಪ್ರಕೃತ ಮೂಡಗೋಪುರದ ನಿರ್ಮಾಣಕಾರ್ಯವು ಕೈಗೆತ್ತಿಕೊಂಡು ಕಾಮಾಗಾರಿಯು ಮುಕ್ತಾಯ ಹಂತದಲ್ಲಿದೆ. ಕಳೆದ 5 ವರ್ಷಗಳ ಹಿಂದೆ ಇಲ್ಲಿಯ ಶಿಲಾಮಯ ದೇವಸ್ಥಾನದ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ನಡೆದಿದೆ. ಇದೀಗ ಊರ, ಪರವೂರ, ಭಕ್ತಾದಿಗಳ ದಾನಿಗಳ ಸಹಕಾರದೊಂದಿಗೆ ಅಂದಾಜು ವೆಚ್ಚ ರೂ.1.50 ಕೋಟಿ ವೆಚ್ಚಾದ ಶಿಲಾಮಯ ಗೋಪುರ, ಕೇರಳ ಮಾದರಿ ಕಲಾಕೃತಿಯಲ್ಲಿ ನಿರ್ಮಿಸಿದ್ದು ಎ.29 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಅನುವಂಶಿಯ ಆಡಳಿತ ಮೊಕ್ತೇಸರ ಡಾ| ಯಂ. ಹರ್ಷ ಸಂಪಿಗೆತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.