ಬೆಳ್ತಂಗಡಿ ಕೇಂದ್ರ ಖಿಳ್ರ್ ಜುಮಾ ಮಸ್ಜಿದ್‌ಗೆ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಭೇಟಿ

ಬೆಳ್ತಂಗಡಿ: ಬೆಳ್ತಂಗಡಿ ಖಿಲ್ರ್ ಜುಮ್ಮಾ ಮಸ್ಜಿದ್ ಇಲ್ಲಿಗೆ ದ.ಕ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಅವರು ಏ.8 ರಂದು ಭೇಟಿ ಮಾಡಿ ಸಮುದಾಯ ನಾಯಕರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭ ಜಮಾಅತ್ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ ನಝೀರ್, ಸಯ್ಯಿದ್ ಅಕ್ರಂ ಅಲೀ ತಂಙಳ್ ಬರಮಾಡಿಕೊಂಡು ಮಾತುಕತೆ ನಡೆಸಿದರು.
ಮಿಥುನ್ ರೈ ನಿಯೋಗದಲ್ಲಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ರಂಜನ್ ಜಿ ಗೌಡ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಮಾಜಿ ಶಾಸಕ ವಸಂತ ಬಂಗೇರ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ನಗರ ಪಂಚಾಯತ್ ಸದಸ್ಯರುಗಳು ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.