ವಸಂತ ಬಂಗೇರರ ನಳಿನ್ ಕುರಿತ ಸಾರ್ವಜನಿಕ ಭಾಷಣಕ್ಕೆ ಪ್ರತಾಪಸಿಂಹ ನಾಯಕ್ ಹೇಳಿದ್ದೇನು?

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರ ಅವರು ಆಡಿರುವ ಮಾತನ್ನು ಖಂಡಿಸಿರುವ ಬಿಜೆಪಿ ವಿಭಾಗೀಯ ಸಹಪ್ರಭಾರಿ ಪ್ರತಾಪಸಿಂಹ ನಾಯಕ್ ಅವರು ಏ.8 ರಂದು ಬೆಳ್ತಂಗಡಿ ಪತ್ರಿಕಾಗೋಷ್ಟಿಯಲ್ಲಿ ಅವರದೇ ಶೈಲಿಯಲ್ಲಿ ಪ್ರತಿಕ್ರಿಯೆ  ನೀಡಿದ್ದಾರೆ.
ಸದ್ರಿ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಕಾಂಗ್ರೆಸ್ ವಿಚಾರಗಳಿಲ್ಲದೆ ಸ್ಥಳೀಯ ವಿಚಾರಗಳ ಬಗ್ಗೆ, ನಮ್ಮ ಅಭ್ಯರ್ಥಿಯ ದೈಹಿಕ ವಿಚಾರಗಳ ಬಗ್ಗೆ ಮಾತನಾಡಿ ಲೇವಡಿ ಮಾಡುತ್ತಿರುವುದು 5 ಬಾರಿ ವಿಧಾನ ಸಭೆಗೆ ಆರಿಸಿ ಬಂದಿರುವ ಅವರಿಗೆ ಶೋಭೆ ತರುವುದಿಲ್ಲ. ಅದಕ್ಕಿಂತ ನಾವು ಇದೇ ಮಾಜಿ ಶಾಸಕರಿಂದ ಹೆಚ್ಚು ಜವಾಬ್ಧಾರಿಯುತವಾದ, ಅಥವಾ ಸರಕಾರದ ನೀತಿ ನಿಯಮಗಳ ಬಗ್ಗೆ ಟೀಕೆ ನಿರೀಕ್ಷಿಸುತ್ತೇವೆಯೇ ಹೊರತು ಮನರಂಜನೆಗಾಗಿ, ಶಿಳ್ಳೆಗಳಿಗೋಸ್ಕರ ಮಾತನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಅವರು ಬೇಕಾದರೆ ಈ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳ ಬಗ್ಗೆ ಹೆಚ್ಚು ಅರ್ಥಪೂರ್ಣವಾಗಿ ನಮ್ಮ ಜೊತೆ ಸಂವಾದಕ್ಕೆ -ಚರ್ಚೆಗೆ ಬರಲಿ. ವೈಯುಕ್ತಿಕ ಟೀಕೆ ಇನ್ನಾದರೂ ನಿಲ್ಲಿಸಲಿ ಎಂದು ಬಿಜೆಪಿ ಆಗ್ರಹಿಸುತ್ತದೆ.
ಅವರು ಮಾತನಾಡಿರುವ ಶೈಲಿಯನ್ನು ಕಾಂಗೆಸ್‌ನವರೇ ಒಪ್ಪುವುದಿಲ್ಲ, ಜನತೆಯಂತೂ ಖಂಡಿತಾ ಒಪ್ಪುವುದಿಲ್ಲ ಎಂದಿದ್ದಾರೆ. ಗೋಷ್ಟಿಯಲ್ಲಿ ಸುನಿಲ್ ಕುಮಾರ್, ಶಾಸಕ ಹರೀಶ್ ಪೂಂಜ, ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಜಿಲ್ಲಾ ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ತಾಲೂಕು ಚುನಾವಣಾ ಪ್ರಭಾರಿ ಜಿ ಆನಂದ ಬಂಟ್ವಾಳ ಮತ್ತು ಮಾಧ್ಯಮ ಸಂಯೋಜಕ ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.