HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಗುರುವಾಯನಕೆರೆ: ಉದ್ಯಮಿ ಫೆಲಿಕ್ಸ್ ಮೋರಾಸ್ ನಿಧನ

ಗುರುವಾಯನಕೆರೆ: ಗುರುವಾಯನಕೆರೆ ಬಸ್‌ನಿಲ್ದಾಣದ ಬಳಿಯ ಮೋರಾಸ್ ಮೆಟಲ್ ಮಾರ್ಟ್‌ನ ಮಾಲಕ ಫೆಲಿಕ್ಸ್ ಮೋರಾಸ್ (66.ವ) ಅವರು ಎ.6ರಂದು ಹೃದಯಾಘಾತದಿಂದ ಗುರುವಾಯನಕೆರೆಯ ತಮ್ಮ ನಿವಾಸದಲ್ಲಿ ನಿಧನರಾದರು.
ಇವರು ಗುರುವಾಯನಕೆರೆಯಲ್ಲಿ ಸುಮಾರು 40 ವರ್ಷಗಳಿಂದ ಈ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಗುರುವಾಯನಕೆರೆಯ ವಿಕಾಸ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಜನಪ್ರಿಯರಾಗಿದ್ದರು.
ಮೃತರು ತಂದೆ ಪತ್ರೊಸ್ ಮೋರಾಸ್, ಪತ್ನಿ ಕಾಪಿನಡ್ಕ ಪ್ರಾಥಮಿಕ ಶಾಲಾ ಶಿಕ್ಷಕಿ ಪಿಲೋಮಿನಾ, ಪುತ್ರ ಕೆನಡಾದ ಟೆಕ್ ಮಹಿಂದ್ರಾದಲ್ಲಿ ಏರೋಸ್ಪೇಸ್ ಡಿಸೈನ್ ಇಂಜಿನಿಯರ್ ಆಗಿರುವ ಜೋಯೆಲ್ ಮೊರಾಸ್, ಪುತ್ರಿ ಜೆಸ್ಸಿಟಾ ಮೋರಾಸ್, ಸೊಸೆ, ಅಳಿಯ, ಮೂವರು ಸಹೋದರರು, ಇಬ್ಬರು ಸಹೋದರಿಯರು ಬಂಧು, ವರ್ಗದವರನ್ನು ಅಗಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

1 Comment

Leave a Reply to Parashurama Cancel Reply

Your email address will not be published. Required fields are marked *

Copy Protected by Chetan's WP-Copyprotect.