ಮೇಲಂತಬೆಟ್ಟು ಶ್ರೀದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ

Advt_NewsUnder_1
Advt_NewsUnder_1

ಬೆಳ್ತಂಗಡಿ: ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮನವರ ದೇವಸ್ಥಾನದದಲ್ಲಿ 10ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಎ.17ರಂದು ವಿಜೃಂಭಣೆಯಿಂದ ಜರಗಲಿರುವುದು ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ತಿಳಿಸಿದ್ದಾರೆ.
ಬೆಳಗ್ಗೆ ಶ್ರೀ ದೇವಿ ಸನ್ನಿಧಿಯಲ್ಲಿ ಪೂಜಾ ಕಾರ್ಯಕ್ರಮಗಳು ಬ್ರಹ್ಮಶ್ರೀ ನಡ್ವಂತಾಡಿ ವೇದಮೂರ್ತಿ ಶ್ರೀಪಾದ ತಂತ್ರಿ ಇವರ ವೈದಿಕ ನೇತೃತ್ವದಲ್ಲಿ ಜರುಗಲಿದೆ. ಬೆಳಿಗ್ಗೆ 7.30 ರಿಂದ ಆಚಾರ್ಯವರಣ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ಕಲಶ ಪೂಜೆ, ನವಕ ಕಲಶಾಭಿಷೇಕ, ದೇವಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ.
ಬೆಳಿಗ್ಗೆ 9 ರಿಂದ ಗುರು ಪೂಜೆ, 10 ರಿಂದ ಶ್ರೀ ದುರ್ಗಾ ಹೋಮ ಪ್ರಾರಂಭ, ಗಂಟೆ 11 ರಿಂದ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 12ಕ್ಕೆ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮಹಾಸಂಸ್ಥಾನಂ, ಸುಬ್ರಹ್ಮಣ್ಯ ಮಠ ಹಾಗೂ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಕ್ಷೇತ್ರಕ್ಕೆ ಆಗಮನ. ಮಧ್ಯಾಹ್ನ ಗಂಟೆ 12.30 ಕ್ಕೆ ಶ್ರೀ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ಮಧ್ಯಾಹ್ನ 1 ಗಂಟೆಗೆ ಸಾರ್ವಜಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5.30 ರಿಂದ ಶ್ರೀ ದೇವಿ ಭಗವತೀ ಅಮ್ಮ ಭಜನಾ ಮಂಡಳಿ, ಮೇಲಂತಬೆಟ್ಟು ಹಾಗೂ ಭಕ್ತರಿಂದ ಭಜನಾ ಕಾರ್ಯಕ್ರಮ. ರಾತ್ರಿ ಗಂಟೆ 7 ಕ್ಕೆ ಶ್ರೀ ದೇವಿಗೆ ಮಹಾ ರಂಗಪೂಜೆ, ಮಹಾಪೂಜೆ ಜರುಗಲಿದೆ. ರಾತ್ರಿ ಗಂಟೆ 8.35 ರಿಂದ ಅಗ್ನಿಗುಳಿಗ ದೈವಕ್ಕೆ “ಸಿರಿ ಸಿಂಗಾರದ ಕೋಲ” ವೈಭವಪೂರ್ಣವಾಗಿ ಜರಗಲಿರುವುದು. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯೋಗೀಶ್ ಪೂಜಾರಿ ವಿನಂತಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.