ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ

ಬಳಂಜ: ಹಲವಾರು ವರ್ಷಗಳ ಭವ್ಯ ಇತಿಹಾಸವಿರುವ ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾಮಹೋತ್ಸವ ಹಾಗೂ ಸಾಮೂಹಿಕ ಯುಗಾದಿ ಆಚರಣೆ, ಧಾರ್ಮಿಕ ಸಭೆ ಯು ಎ.6 ರಂದು   ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವಿಜೃಂಭಣೆ ಯಿಂದ ಜರುಗಿತು.
ಎ.5 ರಂದು ಸಂಜೆ 4 ರಿಂದ ಮೆರವಣಿಗೆಯಲ್ಲಿ ಊರವರಿಂದ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ ನಡೆಯಿತು. ಎ.6 ರಂದು ಸಾಮೂಹಿಕ ಯುಗಾದಿ ಆಚರಣೆ ಹಾಗೂ ಧಾರ್ಮಿಕ ಸಭೆ, ಬೆಳಿಗ್ಗೆ ತೋರಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಧ್ವಜಾರೋಹಣ ನಡೆಯಿತು.  ಸಂಜೆ ನಡೆದ  ಧಾರ್ಮಿಕ ಸಮಾರಂಭದಲ್ಲಿ  ಉತ್ತರಾಖಂಡ  ಗೋತೀರ್ಥ ಕಪಿಲಾಶ್ರಮ ಶ್ರೀಗಳಾದ  ಶ್ರೀ ರಾಮಚಂದ್ರ  ಸ್ವಾಮೀಜಿ  ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಅಶ್ವಥ್ ಹೆಗ್ಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಳಿಯ ಜ್ಯುವೆಲ್ಲರ್‍ಸ್‌ನ ಚೆಯರ್‌ಮೆನ್ ಕೇಶವಪ್ರಸಾದ್ ಮುಳಿಯ,  ಬೆಂಗಳೂರು ಕೈಗಾರಿಕ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ,  ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್,  ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ  ಬಿ.ಶೀತಲ್ ಪಡಿವಾಳ್ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ಸತೀಶ್ ರೈ  ಬಾರ್ದಡ್ಕ ಉಪಸ್ಥಿತರಿದ್ದರು.  ಸಮಾಜ ಸೇವಕ ಹೆಚ್.ಧರ್ಣಪ್ಪ ಪೂಜಾರಿ ಬಳಂಜ ರವರನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಜಿಲ್ಲೆಯ ಹೆಸರಾಂತ ಕಲಾವಿದರ ತಂಡದಿಂದ ಪಿಲಿನಲಿಕೆ, ಸಂಜೆ ಗಂಟೆ 6 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರಚಿಸಿ ನಟಿಸಿರುವ ಚಾ ಪರ್‍ಕ ಕಲಾವಿದರಿಂದ ಹಾಸ್ಯಮಯ ತುಳುನಾಟಕ “ಯಾನ್ ಪಂಡೆಂದ್ ಪನೊಡ್ಚಿ“, ಉತ್ಸವ ಬಲಿ , ವಸಂತ ಕಟ್ಟೆ ಪೂಜೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ  ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.