ಶ್ರೀರಾಮ ಕ್ಷೇತ್ರದಲ್ಲಿ 59 ನೇ ವರ್ಷದ ಶ್ರೀ ರಾಮತಾರಕ ಮಂತ್ರ -ಸಪ್ತಾಹ ಸಮಾರಂಭ ಉದ್ಘಾಟನೆ


ಧರ್ಮಸ್ಥಳ: ಇಲ್ಲಿನ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಶ್ರೀರಾಮ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 59 ನೇ ವರ್ಷದ ಶ್ರೀ ರಾಮತಾರಕ ಮಂತ್ರ -ಸಪ್ತಾಹ ಸಮಾರಂಭಕ್ಕೆ ಏ. 7 ರಂದು ಭಕ್ತಿ ಭಾವದಿಂದ ಚಾಲನೆ ನೀಡಲಾಯಿತು.


ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಈಗಿನ ಪಟ್ಟಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಚಂಡೀಘಢದ ನಾಥ್ ಪರಂಪರೆಯ ಮುಖ್ಯಸ್ಥೆ ಮಾತಾಜಿ ಮುಕ್ತಾನಂದ ಸ್ವಾಮೀಜಿ ಪ್ರಥಮ ದೀಪಪ್ರಜ್ವಲನಗೊಳಿಸಿ ಚಾಲನೆ ನೀಡಿದರು. ಈ ವೇಳೆ ಬ್ರಹ್ಮಾನಂದ ಸರಸ್ವತಿ ಸ್ವಮೀಜಿಗಳು, ಶಾಸಕ ಹರೀಶ್ ಪೂಂಜ, ನ್ಯಾಯವಾದಿ ಹಾಗೂ ನೋಟರಿ ಪಬ್ಲಿಕ್ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜೀತಾ ವಿ ಬಂಗೇರ, ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ಶ್ರೀ ರಾಮಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್ ಮುಖ್ಯ ಅತಿಥಿಗಳಾಗಿದ್ದರು.
ಸಮಾರಂಭದಲ್ಲಿ ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ದನ್, ಕ್ಷೇತ್ರದ ಟ್ರಸ್ಟಿಗಳಾದ ಮೋಹನ್ ಉಜ್ಜೋಡಿ, ತುಕರಾಮ ಸಾಲಿಯಾನ್, ಪ್ರಮುಖರಾದ ಅನಂತರಾಮ ರಾವ್ ಚಾರ್ಮಾಡಿ, ಉಮೇಶ್ ಪೂಜಾರಿ ಪುದುವೆಟ್ಟು, ಕೃಷ್ಣಪ್ಪ ಗುಡಿಗಾರ, ಅಣ್ಣಿ ಪೂಜಾರಿ, ಪ್ರಭಾಕರ ಡಿ ಧರ್ಮಸ್ಥಳ, ಮಂಜುನಾಥ ಶೆಟ್ಟಿ ಕಲ್ಮಂಜ, ಭಗೀರಥ ಜಿ ಮೇಲಂತಬೆಟ್ಟು, ಎಂ.ಬಿ ಜಯಶಂಕರ್ ಉಜಿರೆ, ಮೋಹನ್ ಶೆಟ್ಟಿಗಾರ್, ವೆಂಕಟ್ರಮಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಲಕ್ಷ್ಮೀಪತಿ ಗೋಪಾಲಾಚಾರ್ಯ ಆಗಮ ಪ್ರವೀಣ ಬೆಂಗಳೂರು ಇವರ ವೈದಿಕ ನೇತೃತ್ವದಲ್ಲಿ ನಡೆಯುವ ಈ ಆಹೋರಾತ್ರಿ ಶ್ರೀರಾಮ ನಾಮ ಭಜನಾ ಸಪ್ತಾಹದ ಮಂಗಳ ಕಾರ್ಯಕ್ರಮ ಏ. 14 ರಂದು ನಡೆಯಲಿದೆ. ಜೊತೆಗೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾಬ್ರಹರಥೋತ್ಸವವೂ ಸಂಪನ್ನಗೊಳ್ಳಲಿದೆ.
ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ರಾತ್ರಿ 7 ರಿಂದ 8 ಗಂಟೆಯವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಏ. 10: ರಾತ್ರಿ 7 ರಿಂದ ಪುಷ್ಪ ರಥೋತ್ಸವ
ಏ. 11: ರಾತ್ರಿ 7 ರಿಂದ ಚಂದ್ರಮಂಡಲ ರಥೋತ್ಸವ
ಏ. 12: ರಾತ್ರಿ 7 ರಿಂದ ಬೆಳ್ಳಿ ರಥೋತ್ಸವ
ಏ. 13: ರಾತ್ರಿ 7 ರಿಂದ ಹನುಮಾತ್ ರಥೋತ್ಸವ
ಏ. 14: ರಾತ್ರಿ 7 ರಿಂದ ಮಹಾ ಬ್ರಹ್ಮ ರಥೋತ್ಸವ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.