ದೇವಸ್ಥಾನಕ್ಕಾಗಿ ಯುವ ಸಮಾವೇಶ ಉಭಯ ಜಿಲ್ಲೆಯಲ್ಲೇ ಚಂದ್ಕೂರಿನಲ್ಲಿ ಇದು ಮೊದಲು: ಹರೀಶ್ ಪೂಂಜ

Advt_NewsUnder_1
Advt_NewsUnder_1
Advt_NewsUnder_1

ಚಂದ್ಕೂರು ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ತರುಣ ಸಮಾವೇಶ

ತರುಣ: ಸಮಾವೇಶ ಉದ್ಘಾಟಿಸಿ ಶಾಸಕರು ಮಾತನಾಡಿದರು


ತರುಣ ೧: ಸಭಾ ಕಾರ್ಯಕ್ರಮಕ್ಕೂ ಮುನ್ನ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯ್ಯುತ್ತಿರುವ ಗಣ್ಯರು

ಲಾಯಿಲ: ಇಲ್ಲಿನ ವಿಶ್ವಪ್ರಸಿದ್ಧ ಶ್ರೀ ದೇವೀ ಕ್ಷೇತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ದಿನಾಂಕ ನಿಗಧಿಯಾಗಿದ್ದು. ಆ ನಿಟ್ಟಿನಲ್ಲಿ ಶ್ರೀ ದೇವರ ಕಾರ್ಯದ ಪ್ರಚಾರ ಮತ್ತು ಇತರೇ ಜವಾಬ್ಧಾರಿಗಳನ್ನು ನಿರ್ವಹಿಸಲು ನಡ ಮತ್ತು ಲಾಯಿಲ ಈ ಎರಡೂ ಗ್ರಾಮದ ಯುವ ಸಮೂಹ ಈ ರೀತಿ ಒಟ್ಟಾಗಿರುವುದು ಉಭಯ ಜಿಲ್ಲೆಯ ಬ್ರಹ್ಮಕಲಶೋತ್ಸವಗಳ ಇತಿಹಾಸದಲ್ಲೇ ಇದೇ ಮೊದಲು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಲಾಯಿಲ ಶ್ರೀ ವಿಘ್ನೇಶ್ವರ ಕಲಾ ಮಂದಿರದಲ್ಲಿ ಏ. 7 ರಂದು ನಡೆದ ತರುಣ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಲಾಯಿಲ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ದೇವಸ್ಥಾನ ಉಭಯ ಸಮಿತಿಗಳ ಜವಾಬ್ದಾರಿಯುತ ಪದಾಧಿಕಾರಿಗಳಾದ ಸುಬ್ರಾಯ ಡೋಂಗ್ರೆ, ಪ್ರಸಾದ್ ಶೆಟ್ಟಿ ಏಣಿಂಜ, ಅರವಿಂದ ಲಾಯಿಲ, ಸುಧಾಕರ, ಹರೀಶ್, ಅಲೋಕ್ ಅಜ್ರಿ, ಪ್ರಜ್ವಲ್ ಉಪಸ್ಥಿತರಿದ್ದರು. ಜಗದೀಶ್ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯುವಕರಿಗೆ ಆಮಂತ್ರಣ ಹಂಚಿಕೆ ಬಗ್ಗೆ ವಿವಿಧ ಜವಾಬ್ಧಾರಿಗಳನ್ನು ಹಂಚಲಾಯಿತು.

ತಾಲೂಕಿನ 81 ಗ್ರಾಮಗಳ ಹಿಂದೂ ಮನೆಗಳಿಗೆ ಆಮಂತ್ರಣ
ಇವತ್ತು ಸೇರಿರುವ ತರುಣರ ಮೂಲಕ ತಲೂಕಿನ 81 ಗ್ರಾಮಗಳ ಪ್ರತೀ ಹಿಂದೂಗಳ ಮನೆಗಳಿಗೆ ಆಮಂತ್ರಣ ತಲುಪಿಸುವ ಕೆಲಸ ಮಾಡಲಾಗುವುದು. ಅಂತಹಾ ಸಂಪರ್ಕದ ಸಂಕಲ್ಪ ಮತ್ತು ದೀಕ್ಷೆ ತೆಗೆದುಕೊಳ್ಳಲು ಇಲ್ಲಿ ಸೇರಿರುವ ಯುವ ಕಾರ್ಯಕರ್ತರು ಅಭಿನಂದನೆಗೆ ಅರ್ಹರು.
ಹರೀಶ್ ಪೂಂಜ
ಶಾಸಕರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.