ಚಂದ್ಕೂರು ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಆಯುತ ಚಂಡಿಕಾಯಾಗದ ಮೂಲಕ ವಿಶ್ವಪ್ರಸಿದ್ಧವಾಗಿರುವ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಮಹಾಕಾರ್ಯ ಭಕ್ತಿ ಭಾವದೊಂದಿಗೆ ನಡೆಯುತ್ತಿದ್ದು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಪುನರ್ ಪ್ರತಿಪ್ಟಾಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಸಮಿತಿಯ ಕಾರ್ಯಾಲಯವನ್ನು ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಏ. 6 ರಂದು ತೆರೆಯಲಾಯಿತು.
ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಧನಂಜಯ ಅಜ್ರಿ ದೀಪ ಬೆಳಗುವುದರ ಮೂಲಕ ಕಾರ್ಯಾಲಯ ಉದ್ಘಾಟಿಸಿದರು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳಾದ ವಿಠಲ ಶೆಟ್ಟಿ ಲಾಯಿಲ, ಸುಬ್ರಾಯ ಡೊಂಗ್ರೆ, ಯೋಗೀಶ್ ಭಿಡೆ ಭಜಕ್ರೆಸಾಲ್, ಗಣೇಶ್ ಐತಾಳ್, ಗಿರೀಶ್ ಡೋಂಗ್ರೆ, ವಸಂತ ಸುವರ್ಣ, ರಾಜೇಶ್ ಶೆಟ್ಟಿ ಲಾಯಿಲ, ಅಶೋಕ್ ಶೆಟ್ಟಿ ಲಾಯಿಲ, ಪ್ರಸಾದ್ ಶೆಟ್ಟಿ ಎಣಿಂಜೆ ಹಾಗೂ ಊರ ಹತ್ತು ಸಮಸ್ತರು, ಜಂಟಿ ಸಮಿತಿ ಪದಾಧಿಕಾರಿ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.


ರವಿವಾರ ತರುಣ ಸಮಾವೇಶ:
ಶ್ರೀ ಕ್ಷೇತ್ರದ ಜೋರ್ಣೋದ್ಧಾರ ಕಾರ್ಯ ಈಗಾಗಲೇ ನಡ ಮತ್ತು ಲಾಯಿಲ ಈ ಎರಡು ಗ್ರಾಮಗಳ ಭಗವದ್ಭಕ್ತರ ಅಪೂರ್ವ ಕೊಡುಗೆಯಿಂದ ಸುಮಾರು 1.40 ಕೋಟಿ ರೂ ವೆಚ್ಚದಲ್ಲಿ ನಡೆದಿದ್ದು, ಇನ್ನೂ 50 ಲಕ್ಷ ರೂ. ಗಳು ಬೇಕಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಸಮಿತಿ ಪತ್ರಿಕಾಗೋಷ್ಟಿ ಮೂಲಕ ನಾಡಿನ ಆಸ್ತಿಕ ಬಾಂಧವರ ಗಮನವನ್ನು ಇತ್ತ ಸೆಳೆದಿದ್ದು ಬೇಡಿಕೆಯನ್ನು ಅವರ ಮುಂದಿಟ್ಟಿದೆ. ಅದರ ಜೊತೆಗೆ ಇದೀಗ ಇದೇ ಎರಡು ಗ್ರಾಮಗಳ ತರುಣರನ್ನು ಧಾರ್ಮಿಕ ಕ್ಷೇತ್ರದತ್ತ ಸೆಳೆಯುವ ಕಾರ್ಯಯೋಜನೆ ರೂಪಿಸಿದ್ದು ಏ. 7 ರಂದು ತರುಣ ಸಮಾವೇಶ ಹಮ್ಮಿಕೊಂಡಿದೆ. ಎರಡೂ ಗ್ರಾಮಗಳ ತರುಣರನ್ನು ಮಾತ್ರ ಈ ಕ್ಷೇತ್ರಕ್ಕೆ ಆಹ್ವಾನಿಸಿ ಅವರಿಗೂ ಮಾನ್ಯತೆ ನೀಡಿ ಅವರ ಸಹಕಾರವನ್ನೂ ಪಡೆಯುವತ್ತ ಚಿತ್ತ ಕೇಂದ್ರೀಕರಿಸಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಪಡೆಯನ್ನು ಬಡಿದೆಬ್ಬಿಸುವ ಕಾರ್ಯಕ್ಕೆ ಕೈ ಹಾಕಿದೆ.

ವರದಿ: ಪ್ರಸಾದ್ ಶೆಟ್ಟಿ ಎಣಿಂಜ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.