HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಹಿರಿಯ ಧಾರ್ಮಿಕ ವಿದ್ವಾಂಸ ಹಸೈನಾರ್ ಮುಸ್ಲಿಯಾರ್ ಮುಂಡಾಜೆ ನಿಧನ

ಮುಂಡಾಜೆ: 41 ವರ್ಷಗಳ ಕಾಲ ಉಳ್ಳಾಲದ ಕೋಟೆಪುರದಲ್ಲಿ ಧಾರ್ಮಿಕ ಗುರುಗಳಾಗಿ ಆದ್ಯಾತ್ಮಿಕ ಸೇವೆ ನೀಡಿದ್ದ,‌ ಹಿರಿಯ ವಿದ್ವಾಂಸ ಮುಂಡಾಜೆ ನಿವಾಸಿ ಹಸೈನಾರ್ ಮುಸ್ಲಿಯಾರ್ ರವರು (ಡಾ. ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಕಕ್ಕಿಂಜೆ ಅವರ ಚಿಕ್ಕಪ್ಪ) ಇಂದು( ಏ.5 )ನಿಧನರಾದರು. ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕಕ್ಕಿಂಜೆಯಲ್ಲಿರುವ ಅವರ ಪುತ್ರಿಯ ನಿವಾಸದಲ್ಲಿ ಜುಮಾ‌ ನಮಾಝ್ ವೇಳೆ ಕೊನೆಯುಸಿರೆಳೆದಿದ್ದಾರೆ.
ಇವರು ಉಳ್ಳಾಲ ತಂಙಲ್ ರೊಂದಿಗೆ ಆತ್ಮೀಯರಾಗಿದ್ದು, ಅನೇಕ‌ ವಿದ್ಯಾರ್ಥಿಗಳಿಗೆ ಪವಿತ್ರ ಇಸ್ಲಾಂ ಬೋಧಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಮುಂಡಾಜೆ ಮಸ್ಲಕುತ್ತಾಲೀಮಿ ಸ್ಸುನ್ನಿಯ್ಯ ಟ್ರಸ್ಟ್ ಹಾಗೂ ಎಸ್ ವೈ ಎಸ್ ಮುಂಡಾಜೆ ಕಾರ್ಯದರ್ಶಿ, ಉಜಿರೆ ರೀಜಿನಲ್ ಎಸ್.ಎಮ್.ಎ ಮಾಜಿ ಉಪಾಧ್ಯಕ್ಷ ಶಬೀರ್ ಬಿ.ಕೆ ಹೆಚ್,‌ ಓರ್ವೆ ಪುತ್ರಿ, ಬಂಧುವರ್ಗದವರು, ಅನೇಕ ಶಿಷ್ಯವರ್ಗದವರು, ಹಾಗೂ  ಅಭಿಮಾನಿ ಬಳಗದವರನ್ನು ಅಗಲಿದ್ದಾರೆ.
ಮೃತರ ಮರಣಪೂರ್ವ ಇಚ್ಛೆಯಂತೆ ಅವರ ಅಂತ್ಯಸಂಸ್ಕಾರ ಇಂದು ಸಂಜೆ 6.30 ಕ್ಕೆ ಕಕ್ಕಿಂಜೆ ಮಸೀದಿ ಕಬರ್ ಸ್ಥಾನದಲ್ಲಿ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.