ಎಸ್.ಡಿ.ಎಂ ಸ್ಟಾಫ್ ಕ್ರಿಕೆಟ್: ಪಾಲಿಟೆಕ್ನಿಕ್ ತಂಡಕ್ಕೆ ಟ್ರೋಫಿ

ಉಜಿರೆ: ಇಲ್ಲಿಯ ಎಸ್.ಡಿ.ಎಂ.ನ ವಿವಿಧ ಸಂಸ್ಥೆಗಳ ಸಿಬ್ಬಂದಿಗಳಿಗಾಗಿ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಎಸ್.ಡಿ.ಎಂ ಪಾಲಿಟೆಕ್ನಿಕ್ ಸಿಬ್ಬಂದಿಗಳ ತಂಡವು ಜಯಗಳಿಸಿದೆ. ಏಪ್ರಿಲ್ 3 ರಂದು ನಡೆದ ರೋಚಕ ಪೈನಲ್ ಪಂದ್ಯದಲ್ಲಿ ಪಾಲಿಟೆಕ್ನಿಕ್ ಟೀಮ್(ಎ)ಯು ಬಲಿಷ್ಠ ತಂಡವಾಗಿರುವ ಎಸ್.ಡಿ.ಎಂ ಸ್ಟಾರ್ ಕ್ರಿಕೆಟರ್ಸ್ ವಿರುದ್ದ ಜಯಗಳಿಸುವ ಮೂಲಕ ಸತತ ಎರಡನೇ ಬಾರಿಗೆ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿತು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ  ಸೋಮಶೇಖರ ಶೆಟ್ಟಿ ಹಾಗೂ ಉದ್ಯಮಿ  ಪೂರನ್ ವರ್ಮ ಪ್ರಶಸ್ತಿಗಳನ್ನು ವಿತರಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಶ್ರೀಮತಿ ಸೋನಿಯಾ ವರ್ಮ ಹಾಗೂ ಪಂದ್ಯಾಟ ಸಂಘಟಿಸಿದ್ದ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಕೆ.ಪಿ. ಪ್ರಸಾದ್, ವ್ಯವಸ್ಥಾಪಕ ಚಂದ್ರನಾಥ್ ಜೈನ್ ಉಪಸ್ಥಿತರಿದ್ದರು. ಎಸ್.ಡಿ.ಎಂ. ಕಾಲೇಜಿನ ಸ್ಟಾರ್ ಕ್ರಿಕೆಟರ್ಸ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.