ಶಿಶಿಲ ಗ್ರಾಮವನ್ನು ಬೆಳ್ತಂಗಡಿ ತಾಲೂಕಿನಲ್ಲಿಯೇ ಉಳಿಸಿಕೊಳ್ಳವ ಬಗ್ಗೆ ಗ್ರಾಮಸ್ಥರಿಂದ ಮನವಿ 

ಶಿಶಿಲ: ಹೊಸದಾಗಿ ನಿರ್ಮಾಣಗೊಂಡಿರುವ  ಕಡಬ ತಾಲೂಕಿಗೆ ಶಿಶಿಲ ಗ್ರಾಮವನ್ನು ಸೇರ್ಪಡೆಗೊಳಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಈ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ  ಶಿಶಿಲ ಗ್ರಾಮಸ್ಥರಿಂದ ಶಿಶಿಲ  ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಲಾಯಿತು.

ಶಿಶಿಲ ಗ್ರಾಮವು ಯಾವುದೇ ಕಾರಣಕ್ಕೂ ಕಡಬ ತಾಲೂಕಿಗೆ ಸೇರ್ಪಡೆಯಾಗಬಾರದು . ಬೆಳ್ತಂಗಡಿ ತಾಲೂಕಿನಲ್ಲಿ ಸುಸಜ್ಜಿತವಾದ ರಸ್ತೆ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಹಾಗೂ ಇಲಾಖಾ ಅಧಿಕಾರಿಗಳು  ಉತ್ತಮವಾಗಿ  ಸ್ಪಂದನೆ  ನೀಡುತ್ತಿದ್ದು, ಕೊಕ್ಕಡ ಹೋಬಳಿ ರೈತ ಸಂಪರ್ಕ ಕೇಂದ್ರವೂ  ಹತ್ತಿರದಲ್ಲಿದ್ದು, ಸಾರ್ವಜನಿಕರಿಗೆ ಅನುಕೂಲಕರವಾಗಿರುತ್ತದೆ.  ಒಂದು ವೇಳೆ  ಶಿಶಿಲ ಗ್ರಾಮವು  ಕಡಬ ತಾಲೂಕಿಗೆ ಸೇರ್ಪಡೆಯಾದಲ್ಲಿ ರೈತರು, ಸಾರ್ವಜನಿಕರು ಎಲ್ಲಾ ರೀತಿಯಿಂದಲೂ ತೊಂದರೆ ಅನುಭವಿಸಬೇಕಾಗಬಹುದು . ಆದುದರಿಂದ  ಶಿಶಿಲ ಗ್ರಾಮವನ್ನು ಯಾವುದೇ ಕಾರಣಕ್ಕೂ  ಕಡಬ ತಾಲೂಕಿಗೆ ಸೇರ್ಪಡೆ ಮಾಡುವ ಸನ್ನಿವೇಶ ಎದುರಾದಲ್ಲಿ ಇದರ ವಿರುದ್ಧ ಹೋರಾಟ ನಡೆಸುವುದಕ್ಕೆ ಶತಸಿಧ್ಧ ಎಂದು  ಶಿಶಿಲ ಗ್ರಾಮಸ್ಥರು  ಬೆಳ್ತಂಗಡಿ  ಶಾಸಕರಿಗೆ, ಕಂದಾಯ ಸಚಿವರಿಗೆ, ಜಿಲ್ಲಾಧಿಕಾರಿಯವರಿಗೆ ಹಾಗೂ ಗ್ರಾಮ ಪಂಚಾಯತಕ್ಕೆ ಎ.1 ರಂದು ಮನವಿ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.