ಧರ್ಮಸ್ಥಳ: ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳ ಇಲ್ಲಿ ವಿದ್ಯಾರ್ಥಿಗಳಿಗೆ  ಬೇಸಿಗೆ ಶಿಬಿರ ಎ .4 ರಂದು ಜರುಗಿತು. ಶಿಬಿರದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕಿ  ಡಿ. ರತ್ನಾವತಿ ಯವರು ನೆರವೇರಿಸಿ ವಿದ್ಯಾರ್ಥಿಗಳಿಗೆ  ಶುಭ ಹಾರೈಸಿದರು.  ಶಾಲಾ ಮುಖ್ಯೋಪಾಧ್ಯಾಯ  ಪಿ. ಸುಬ್ರಮಣ್ಯ ರಾವ್  ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಮಹತ್ವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.  ಲಕ್ಷಣಗೌಡ ರವರು ಪ್ರಾಸ್ತವಿಕ ಮಾತುಗಳಾನ್ನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ  ಗೋಪಾಲ್ ಮತ್ತು ತಂಡ, ಶಿಕ್ಷಕಿಯರಾದ  ವಿದ್ಯಾ ಸರಸ್ವತಿ,  ಉಷಾಸರಸ್ವತಿ,  ಸತ್ಯವತಿ,   ಶ್ರೀಜಾ,   ಪೂರ್ಣಿಮಾ ಜೋಷಿ ಭಾಗವಹಿಸಿದ್ದರು. ತೆಂಗಿನ ಗರಿಗಳಿಂದ ವಿವಿಧ ವಸ್ತುಗಳ ಮಾದರಿ ಹಾಗೂ ಆಟಿಕೆಗಳನ್ನು ತಯಾರಿಸುವ ವಿಧಾನ, ಕಸೂತಿ, ಬುಕ್ ಬೈಡಿಂಗ್, ಶುಭಾಶಯ ಪತ್ರ ತಯಾರಿಯನ್ನು ವಿದ್ಯಾರ್ಥಿಗಳಿಗೆ ಹೇಳಿ ಕೊಡಲಾಯಿತು.
ಉಷಾಸರಸ್ವತಿ ಸ್ವಾಗತಿಸಿ ,ನಿಖಿಲಾ ಡಿ. ನಿರೂಪಿಸಿ,  ಶೇಖರ್ ಗೌಡರವರು ವಂದಿಸಿದರು. ಎಲ್ಲಾ ಶಿಕ್ಷಕ ವೃಂದದವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.