ತಾಲೂಕು ಮಟ್ಟದ ಚುನಾವಣಾ ಅರಿವು ಜಾಥಾ

ಬೆಳ್ತಂಗಡಿ : ಜಿಲ್ಲಾ ಸ್ವೀಪ್ ಘಟಕ ಮಂಗಳೂರು ಇದರ ವತಿಯಿಂದ ತಾಲೂಕು ಮಟ್ಟದ ಚುನಾವಣಾ ಅರಿವು  (ಸ್ವೀಪ್) ಕಾರ್ಯಕ್ರಮದ ಆಂಗವಾಗಿ ಕಾಲ್ನಡಿಗೆ ಜಾಥಾವು ಎ.5 ರಂದು ಜರುಗಿತು.
ಕುವೆಟ್ಟು ಗ್ರಾ.ಪಂ ಸಮೀಪ ನಡೆದ ಸರಳ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎಸ್.ಆರ್ ನಾಯಕ್ ಜಾಥಾಕ್ಕೆ ಚಾಲನೆ ನೀಡಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಕರೆ ನೀಡಿದರು.

ತಹಶೀಲ್ದಾರ್ ಗಣಪತಿ ಶಾಸ್ತ್ರಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಕಾರ್‍ಯದರ್ಶಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕುವೆಟ್ಟು ಗ್ರಾ.ಪಂ ವಠಾರದಿಂದ ಹೊರಟ ಜಾಥಾ ಲಾಯಿಲ ಗ್ರಾ.ಪಂ ವಠಾರದಲ್ಲಿ ಸಮಾಪನಗೊಂಡಿತು. ಗುರುವಾಯನಕೆರೆಯಿಂದ ಬೆಳ್ತಂಗಡಿ ನಗರದ ಮೂಲಕ ಲಾಯಿಲಕ್ಕೆ ತೆರಳಿ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.