ಎ.9: ಶ್ರೀ ಕ್ಷೇತ್ರ ಬಲ್ಯೊಟ್ಟುವಿನಲ್ಲಿ ಚಂಡಿಕಾಯಾಗ

ಬೆಳ್ತಂಗಡಿ: ಇಲ್ಲಿಯ ಹೊಸ್ಮಾರು ಶ್ರೀ ಕ್ಷೇತ್ರ ಬಲ್ಯೊಟ್ಟುವಿನಲ್ಲಿ ಸಮಸ್ತ ಮನುಕುಲದ ಶ್ರೇಯೋಭಿವೃದ್ಧಿಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶಿವಗಿರಿ ಮಠಾಧೀಶರಾದ ಪದ್ಮಶ್ರೀ ಶ್ರೀಮದ್ ವಿಶುದ್ದಾನಂದ ಸ್ವಾಮೀಜಿಯವರ ಸಾನಿಧ್ಯದಲ್ಲಿ ಚಂಡಿಕಾಯಾಗ ಎ.9 ರಂದು ಜರುಗಲಿರುವುದು.
ಎ.8 ರಂದು ಬೆಳಿಗ್ಗೆ ಯಜ್ಞಾಚಾರ್ಯ ಶ್ರೀಮದ್ ವಿಶುದ್ದಾನಂದ ಸ್ವಾಮೀಜಿಯವರನ್ನು ಹೊಸ್ಮಾರು ಜಂಕ್ಷನ್‌ನಿಂದ ಮೆರವಣಿಗೆಯ ಮೂಲಕ ಸ್ವಾಗತಿಸಿ, ನಂತರ ಊರ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿರುವುದು. ನಂತರ ಸರಸ್ವತಿ ಪೂಜೆ, ಪ್ರಸಾದ ವಿತರಣೆ ನಡೆದು, ಸಂಜೆ ಲೋಕ ಕಲ್ಯಾಣಾರ್ಥವಾಗಿ ವಿಶ್ವಶಾಂತಿ ಯಜ್ಞ ಜರುಗಲಿದೆ.
ಎ.9ರಂದು ಬೆಳಿಗ್ಗೆ ಗಣಹೋಮ, ಗುರುಪೂಜೆ, ಭಗವತಿ ಸೇವೆ ನಡೆದು, ನಂತರ ಚಂಡಿಕಾಯಾಗ ಪೂರ್ಣಾಹುತಿ, ಪ್ರಸಾದ ವಿತರಣೆ ಜರುಗಲಿರುವುದು. ವಿವಿಧ ಮಠದ ಸ್ವಾಮೀಜಿಗಳ  ದಿವ್ಯ ಉಪಸ್ಥಿತಿಯಲ್ಲಿ  ಕಾರ್ಯಕ್ರಮ  ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಬಲ್ಯೊಟ್ಟು ಚಂಡಿಕಾಯಾಗ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.