6 ನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜೇಂದ್ರ ಕುಮಾರ್‌ರಿಗೆ ಧರ್ಮಸ್ಥಳದಲ್ಲಿ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ದ.ಕ ಜಿಲ್ಲೆ ಸಹಕಾರಿ ರಂಗದಲ್ಲಿ ರಾಷ್ಟ್ರದಲ್ಲೇ ಮುಂದುವರಿದ ಜಿಲ್ಲೆ: ಡಾ. ಡಿ ವೀರೇಂದ್ರ ಹೆಗ್ಗಡೆ

* ಡಾ. ಹೆಗ್ಗಡೆಯವರಿಂದ ರಾಜೇಂದ್ರ ಕುಮಾರ್‌ರಿಗೆ ಸನ್ಮಾನ

ಧರ್ಮಸ್ಥಳ: ಸಹಕಾರಿ ಕ್ಷೇತ್ರ ಜಿಲ್ಲೆಯಲ್ಲಿ ಕೃಷಿ, ಮಹಿಳಾ ಸಬಲೀಕರಣ ರಂಗದಲ್ಲಿ ದೊಡ್ಡ ಸಾಧನೆ ಮಾಡಿದೆ. ರಾಜೇಂದ್ರ ಕುಮಾರ್ ಅವರು ಈ ಸಾಧನೆಗೆ ನೇತೃತ್ವ ನೀಡುತ್ತಿದ್ದು ಇಂದು ಅವರಿಗೆ ಸಲ್ಲುವ ಎಲ್ಲಾ ಗೌರವ ಮತ್ತು ಯಶಸ್ಸುಗಳು ಅದು ಸಂಸ್ಥೆಗೆ ಹೋಗುತ್ತದೆ. ಸಹಕಾರಿ ರಂಗದಲ್ಲಿ ನಮ್ಮ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಮುಂದುವರಿದಿದ್ದು ಡಾ. ರಾಜೇಂದ್ರ ಕುಮಾರ್ ಮೂಲಕ ಇದರ ಕೀರ್ತಿ ಇನ್ನಷ್ಟು ಬೆಳಗುವಂತಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಡಿಸಿಸಿ ಬ್ಯಾಂಕ್‌ಗೆ 6 ನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಸಹಕಾರಿ ಭೀಷ್ಮ, ಡಾ. ಎಂ. ಎನ್ ರಾಜೇಂದ್ರ ಕುಮಾರ್ ಅವರು ಏ. 3 ರಂದು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಡಾ. ಹೆಗ್ಗಡೆಯವರು ಶ್ರೀ ಕ್ಷೇತ್ರದ ವತಿಯಿಂದ ಅವರನ್ನು ಸನ್ಮಾನಿಸಿ ಮಾತನಾಡಿದರು.
ಡಾ. ರಾಜೇಂದ್ರ ಕುಮಾರ್ ಅವರ ಜೊತೆ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿರುವ ಎಲ್ಲ ನಿರ್ದೇಶಕರೂ ಕೂಡ ನಮ್ಮ ಜಿಲ್ಲೆಯ ಸಹಕಾರಿ ಸೇವೆಯನ್ನು ಇನ್ನಷ್ಟು ವಿಸ್ತರಿಸಲು, ಉದ್ಯೋಗ ಮತ್ತು ಕೃಷಿಕರಿಗೆ ಇನ್ನಷ್ಟು ಪ್ರಯೋಜನಕಾರಿಯಾಗುವಲ್ಲಿ ಕಂಕಣಬದ್ಧರಾಗಬೇಕು. ಇಂದು ಇಲ್ಲಿ ಆ ಸಂಕಲ್ಪವನ್ನು ಮಾಡಿ ತೆರಳಬೇಕು ಎಂದು ಹೆಗ್ಗಡೆಯವರು ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್ ಕೋಟ್ಯಾನ್, ನಿರಂಜನ ಭಾವಂತಬೆಟ್ಟು, ಡಾ. ದೇವಿಪ್ರಸಾದ್ ಶೆಟ್ಟಿ ಐಕಳ, ವಾದಿರಾಜ ಶೆಟ್ಟಿ ಎಂ, ಎಸ್.ಬಿ ಜಯರಾಮ ರೈ, ಜಯರಾಹ್ ರೈ, ಎಕ್ಖಾರು ಮೋನಪ್ಪ ಶೆಟ್ಟಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ರವೀಂದ್ರ, ಸಹಕಾರ ಸಂಘಗಳ ಉಪನಿಬಂಧಕ ಸುರೇಶ್ ಗೌಡ, ಜಗದೀಶ್ ಸೂಟರ್‌ಪೇಟೆ, ರವೀಂದ್ರ ಶೆಟ್ಟಿ, ಕುಮಾರ್‌ನಾಥ್, ಉಜಿರೆ ಸಹಕಾರಿ ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಸಹಕಾರ ಭೂಷಣ ಕಾಪಿಟೇಬಲ್ ಪುಸ್ತಕ ಬಿಡುಗಡೆ:
ಇದೇ ವೇಳೆ ಟೈಮ್ಸ್ ಸಮೂಹ ಸಂಸ್ಥೆಯ ವತಿಯಿಂದ ಹೊರತಂದ ಡಾ. ರಾಜೇಂದ್ರ ಕುಮಾರ್ ಬಗೆಗಿನ “ಸಹಕಾರ ಭೂಷಣ” ಕಾಪಿಟೇಬಲ್ ಪುಸ್ತಕವನ್ನು ಡಾ. ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ವ್ಯಕ್ತಿ ಪರಿಚಯ, ಹೆಸರು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅವರ ಸಾಧನೆಗಳ ಪರಿಚಯವಾಗಬೇಕು. ಆ ನಿಟ್ಟಿನಲ್ಲಿ ರಾಜೇಂದ್ರ ಕುಮಾರ್ ಅವರ ಅಭೂತಪೂರ್ವ ಸಾಧನೆಯ ಪರಿಚಯವನ್ನು ಈ ಸಂಚಿಕೆ ಬಿಂಭಿಸಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.